ಜೋಡುಪಾಲ ಗೆಳೆಯರ ಬಳಗದ ಕಬಡ್ಡಿ ಕಪ್ ಎನ್. ಎಂ. ಸಿ ಪಾಲು

ಇತ್ತೀಚೆಗೆ ಜೋಡುಪಾಲ ಗೆಳೆಯರ ಬಳಗದ ವತಿಯಿಂದ ನಡೆದ ರಾಜ್ಯ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ ದಲ್ಲಿ ಸುಳ್ಯದ ಎನ್ ಎಂ ಸಿ ತಂಡ ಪ್ರಥಮ ಬಹುಮಾನವನ್ನು ಪಡೆದುಕೊಂಡಿತು .

ದ್ವಿತೀಯ ಬಹುಮಾನವನ್ನು ಕಲ್ಲಡ್ಕದ ವಿಘ್ನೇಶ್ವರ ತಂಡದ ಪಾಲಾದರೆ ತೃತೀಯ ಬಹುಮಾನ ಮಡಿಕೇರಿಯ ಹಿಂದೂ ಕ್ರಿಕೆಟ್ ಕಪ್ ತಂಡದ ಪಾಲಾಯಿತು 4ನೇ ಬಹುಮಾನ ಎನ್ ಎನ್ ಎಸ್ಸಿ ಮದೆ ತಂಡ ಪಡೆದುಕೊಂಡಿತು ಪಂದ್ಯಾಟದ ಆರಂಭಕ್ಕೂ ಮುನ್ನ ನಡೆದ ಉದ್ಘಾಟನಾ ಸಮಾರಂಭದಲ್ಲಿ ದೀಪಪ್ರಜ್ವಲಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಭಾರತ ಕಬಡ್ಡಿ ತಂಡದ ಮಾಜಿ ನಾಯಕ ಬಿ. ಸಿ. ರಮೇಶ್ ರವರು ಇಂತಹ ಕುಗ್ರಾಮದಲ್ಲಿ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾಟವನ್ನು ಆಯೋಜಿಸಿರುವುದು ತುಂಬಾ ಸಂತೋಷವಾಗಿದೆ ಕಬಡ್ಡಿ ಆಟಕ್ಕೆ ಇತ್ತೀಚೆಗೆ ಭಾರಿ ಜನ ಬೆಂಬಲ ಸಿಗುತ್ತಿದೆ ಕಬಡ್ಡಿಯಂತಹ ಪಂದ್ಯಗಳನ್ನು ಮನೆಮನೆಗಳಲ್ಲೂ ವೀಕ್ಷಿಸುತ್ತಿದ್ದಾರೆ ಪ್ರತಿಭಾನ್ವಿತ ಆಟಗಾರರಿಗೆ ಕಬಡ್ಡಿಯಲ್ಲಿ ಒಳ್ಳೆಯ ಭವಿಷ್ಯವಿದೆ.

ಇಲ್ಲಿಯ ಪ್ರಕೃತಿ ನನಗೆ ಬಹಳ ಇಷ್ಟ ನಾನು ಪದೇ ಪದೇ ಈ ಭಾಗಗಳಿಗೆ ಭೇಟಿ ನೀಡುತ್ತಿರುತ್ತೇನೆ ಹಿಂದೆ ನಡೆದ ಜಲಪ್ರಳಯ ನಿಮಗೆಲ್ಲರಿಗೂ ನೋವುಂಟುಮಾಡಿದ್ದು ಆದರೆ ಈಗ ಅದರಿಂದ ಹೊರಬಂದು ಇಂಥ ಕ್ರೀಡೆಗಳಿಂದ ನೀವು ನಿಮ್ಮ ಮನಸುಗಳನ್ನು ಒಂದುಗೂಡಿಸುತಿದ್ದೀರಾ ಎಂದು ಹರ್ಷ ವ್ಯಕ್ತಪಡಿಸಿದರು ಕಬಡ್ಡಿ ಕ್ರೀಡಾಂಗಣವನ್ನು ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷರಾದ ಹೊಸೋಕ್ಲು ಉತ್ತಪ್ಪ ಉದ್ಘಾಟಿಸಿದರು ಪ್ರಸ್ತಾವಿಕವಾಗಿ ಮಾತನಾಡಿದ ಧನಂಜಯ ಅಗೋಳಿಕಜೆ ಯವರು ಜೋಡುಪಾಲ ಮತ್ತು ನೆರೆಹೊರೆಯ ಗ್ರಾಮಗಳು 2018ರ ಆಗಸ್ಟ್ ನ ಜಲಪ್ರಳಯದಲ್ಲಿ ತೀವ್ರ ಸಂಕಷ್ಟಕ್ಕೊಳಗಾಗಿದ್ದವು ಹಲವು ಮನೆಗಳನ್ನು ಬೇರೆಡೆಗೆ ಸ್ಥಳಾಂತರಗೊಳಿಸಲಾಗಿದೆ ಎರಡು ವರ್ಷ ಕೊರೋನಾ ಇನ್ನಷ್ಟು ಸಂಕಷ್ಟಗಳನ್ನು ತಂದೊಡ್ಡಿತು ಆದರೆ ಈಗ ಅಂತಹ ಎಲ್ಲಾ ಸಂಕಷ್ಟಗಳಿಂದ ಹೊರ ಬಂದು ಶುಭಕೃತ್ ಸಂವತ್ಸರದಲ್ಲಿ ನಾವು ಸಂತೋಷದ ಮನಸ್ಸಿನಿಂದ ಜೋಡುಪಾಲ ಗೆಳೆಯ ಬಳಗದ ಆಶ್ರಯದಲ್ಲಿ ಶ್ರಮ ವಹಿಸಿ ಆಯೋಜಿಸಿಸಲಾಗಿದೆ ಎಂದರು. ಸಮಾರಂಭದಲ್ಲಿ ಅತಿಥಿಯಾಗಿ ಭಾಗವಹಿಸಿದ ಜಿಲ್ಲಾ ಅಮೇಚೂರ್ ಅಸೋಸಿಯೇಷನ್ನ ಕಾರ್ಯದರ್ಶಿ ಕಪಿಲ್ ರವರು ಮಾತನಾಡಿ ಈ ಪಂದ್ಯಾಟ ಅತ್ಯಂತ ಯಶಸ್ವಿಯಾಗಿ ಆಯೋಜಿಸಿದ್ದು ರಾಜ್ಯ, ರಾಷ್ಟ್ರ ಮಟ್ಟದ ಪಂದ್ಯಾಟದ ರೀತಿಯಲ್ಲಿ ಮೈದಾನ ಕಂಗೊಳಿಸುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೆಳೆಯರ ಬಳಗದ ಅಧ್ಯಕ್ಷ ಪ್ರಮೋದ್ ಚೆರಿಯಮನೆ ರವರು ವಹಿಸಿದ್ದರು ಕಾರ್ಯಕ್ರಮದಲ್ಲಿ ಗೆಳೆಯರ ಬಳಗದ ಉಪಾಧ್ಯಕ್ಷ ಕೆ. ಆರ್. ರಾಜು, ಪಡ್ಪುಸಂಜಯ್,ಮದೆ ಪಂಚಾಯಿತಿ ಅಧ್ಯಕ್ಷೆ ಚಂದ್ರವತಿ, ಪಂಚಾಯಿತಿ ಸದಸ್ಯ ಸಯ್ಯದ್ ಆಲ್ವಿ ಉಪಸ್ಥಿತರಿದ್ದರು ಪಂದ್ಯಕ್ಕೂ ಮುನ್ನ ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆಯ ಅಧ್ಯಕ್ಷರಾದ ಶಾಂತೆಯಂಡ ರವಿ ಕುಶಾಲಪ್ಪ ರವರು ಆಗಮಿಸಿ ಶುಭ ಹಾರೈಸಿದರು ಕಬ್ಬಡ್ಡಿ ಪಂದ್ಯಾಟಕ್ಕೆ ಮುನ್ನ ಪಂಚಾಯತ್ ಮಟ್ಟದಲ್ಲಿ ಸಾರ್ವಜನಿಕರಿಗೆ ಮತ್ತು ಮಕ್ಕಳಿಗೆ ವಿವಿಧ ಪಂದ್ಯಗಳನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ಜೋಡುಪಾಲ ಗೆಳೆಯರ ಬಳಗದ ಎಲ್ಲಾ ಸದಸ್ಯರು ಪಾಲ್ಗೊಂಡಿದ್ದರು