ಜೋಕಾಲಿ ತಂದ ಆಪತ್ತು ಎರಡು ಜೀವಗಳಿಗೆ ಕುತ್ತು…

ಅಮ್ಮನ ಸೀರೆಯಲ್ಲಿ ಜೋಕಾಲಿ ಆಡುತ್ತಾ ಆನಂದಿಸುತ್ತಿದ್ದ ಎರಡು ಮಕ್ಕಳು ಅದೇ ಜೋಕಾಲಿಯಂದ ಜೀವ ಕಳೆದುಕೊಂಡ ದಾರುಣ ಘಟನೆ ಪಟ್ಟಣಕ್ಕೆ ಸಮೀಪದ ಗಣಗೂರು ಉಂಜಿಗನ ಹಳ್ಳಿಯಲ್ಲಿ ಇಂದು ಸಂಜೆ ನಡೆದಿದೆ.
ಗ್ರಾಮದ ನಿವಾಸಿ ಕಾರ್ಮಿಕ ರಾಜು ಹಾಗೂ ಜಯಂತಿ ಎಂಬುವರ ಪುತ್ರಿ ಮಣಿಕ್ ಶಾ(14) ಹಾಗೂ ಪೂರ್ಣೆಶ್ (12) ಜೀವ ಕಳೆದುಕೊಂಡ ಮಕ್ಕಳು.
ಮೃತ ದುರ್ದೈವಿ ಮಕ್ಕಳು ಮಣಿಕ್ ಶಾ ಹಾಗು ಪೂರ್ಣೆಶ್


ಮನೆಯಲ್ಲಿ ಇಬ್ಬರೇ ಇದ್ದ ಇವರುಇಂದು ಸಂಜೆ ಅಕ್ಕಾ,ತಮ್ಮ ಇಬ್ಬರೂ ಜೋಕಾಲಿಯಲ್ಲಿ ಆಟವಾಡುತ್ತಿದ್ದಾಗ ಜೋಕಾಲಿ ಉರುಳಾಗಿ ಸುತ್ತಿಕೊಂಡ ಪರಿಣಾಮ ಇಬ್ಬರ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಕೆಲಸಕ್ಕೆ ತೆರಳಿದ್ದ ತಾತ ರಾಮಣ್ಣ ಮನೆಗೆ ಬಂದು ನೋಡಿದಾಗ ಎರಡು ಮಕ್ಕಳು ನೇಣು ಬಿಗಿದ ಸ್ಥಿತಿಯಲ್ಲಿದ್ದು ತಕ್ಷಣವೇ ಸೀರೆಯನ್ನು ಕತ್ತರಿಸಿ ಮಕ್ಕಳನ್ನು ಕೇಳಗಿಳಿಸಿದ್ದಾರೆ ಆದರೆ ಆ ವೇಳೆಗೆ ಇಬ್ಬರೂ ಮೃತಪಟ್ಟಿದ್ದಾರೆನ್ನಲಾಗಿದೆ.
ಸ್ಥಳಕ್ಕೆ ಪೊಲೀಸ್ ವೃತ್ತ ನಿರೀಕ್ಷಕ ಮಹೇಶ್,ಸಬ್ ಇನ್ಸ್ಪೆಕ್ಟರ್ ಶ್ರೀಧರ್ ಹಾಗೂ ಸಿಬ್ಬಂದಿಗಳು ತೆರಳಿ ಮೊಕದಮ್ಮೆ ದಾಖಲಿಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.