ಜೈನ ಬಸದಿಗಳ ಜೀರ್ಣೋದ್ಧಾರಕ್ಕೆ ಸಹಾಯಧನ ಪಡೆಯಲು ಅರ್ಜಿ ಆಹ್ವಾನ

ಪ್ರಸಕ್ತ ಸಾಲಿನಲ್ಲಿ ಜೈನ ಸಮುದಾಯದ ಅಭಿವೃದ್ಧಿ ಯೋಜನೆಯಡಿ ಕೊಡಗು ಜಿಲ್ಲೆಯಲ್ಲಿರುವ ಜೈನ ದೇವಾಲಯ (ಬಸದಿ) ನವೀಕರಣ/ದುರಸ್ತಿ/ಜೀರ್ಣೋದ್ಧಾರಕ್ಕಾಗಿ ಸಹಾಯಧನ ಪಡೆಯಲು ಇಚ್ಛೆಯುಳ್ಳ ಜೈನ ಬಸದಿ ಸಮಿತಿ/ ಮಂಡಳಿಯವರಿಂದ ಅರ್ಜಿ ಆಹ್ವಾನಿಸಲಾಗಿದೆ.
ಜೈನ ಬಸದಿ ಸಮಿತಿ/ಮಂಡಳಿಯವರು ನಿಗಧಿತ ನಮೂನೆಯಲ್ಲಿ ದಾಖಲಾತಿಗಳೊಂದಿಗೆ 3 ಪ್ರತಿಗಳನ್ನು ಜಿಲ್ಲಾ ಅಧಿಕಾರಿಗಳು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮಡಿಕೇರಿ ಇಲ್ಲಿಗೆ ಅರ್ಜಿಯನ್ನು ಸಲ್ಲಿಸಬಹುದು.

ನಿಗದಿತ ನಮೂನೆ ಅರ್ಜಿ ಇತರೆ ವಿವರಗಳನ್ನು ಅಲ್ಪಸಂಖ್ಯಾತರ ನಿರ್ದೇಶನಾಲಯದ ವೆಬ್‍ಸೈಟ್ https://dom.karnataka.gov.in ರಲ್ಲಿ ಪಡೆಯಬಹುದು.

error: Content is protected !!