ಜೇಮ್ಸ್ ಚಲನಚಿತ್ರ ನೋಡಲು ಜನ ಸಾಗರ

ದಿವಂಗತ ಪವರ್ ಸ್ಟಾರ್ ಪುನಿತ್ ರಾಜ್ ಕುಮಾರ್ ರವರ ಕಡೆಯ ಚಿತ್ರ ಜೇಮ್ಸ್ ವೀಕ್ಷಣೆಗೆ ಕುಶಾಲನಗರದ ಹೊರವಲಯದ ಸಿನಿಮಾ ಮಂದಿರ ಹೌಸ್ ಫುಲ್ ಆಗಿದೆ.

ಒಟ್ಟು ಮೂರು ಪ್ರದರ್ಶನ ಹೊಂದಿದ್ದ ಚಿತ್ರಮಂದಿರದತ್ತ ಟಿಕೆಟ್ಗಾಗಿ ಬೆಳಗಿನಿಂದಲೇ ಸಾರ್ವಜನಿಕರು ಮುಗಿಬಿದ್ದಿದ್ದರು.

ಇದೇ ವೇಳೆ ಪವರ್ ಸ್ಟಾರ್ ಹುಟ್ಟುಹಬ್ಬದ ಪ್ರಯುಕ್ತ ಬೈಚನಳ್ಳಿ ಗೆಳೆಯರ ಬಳಗ ವತಿಯಿಂದ ಸಿನಿಮಾ ವೀಕ್ಷಣೆಗೆ ಆಗಮಿಸಿದ್ದ ಪ್ರೇಕ್ಷಕರಿಗೆ ಅನ್ನಧಾನ ಏರ್ಪಡಿಸಿದ್ದರು.

error: Content is protected !!