fbpx

ಜೂ.4 ವಿದ್ಯುತ್ ವ್ಯತ್ಯಯ ಉಂಟಾಗಲಿದೆ

ಮಡಿಕೇರಿ ಜೂ.3 : ಮಡಿಕೇರಿ 66/11ಕೆವಿ ವಿದ್ಯುತ್ ಉಪ-ಕೇಂದ್ರದಿಂದ ಹೊರಹೋಗುವ ಬೋಯಿಕೇರಿ ಫೀಡರು ವಿಭಜಿಸಿ ಮಕ್ಕಂದೂರು, ಮುಕ್ಕೊಡ್ಡು ಹಾಗೂ ಪ್ರತ್ಯೇಕಿಸುವ ಕಾಮಗಾರಿಯು ಪೂರ್ಣಗೊಂಡಿದ್ದು ಜೂನ್, 4 ರಂದು ಮಕ್ಕಂದೂರು ಮಾರ್ಗದಲ್ಲಿ ಚಾಲನೆ ಮಾಡಲಾಗುವುದು.

ಬೋಯಿಕೇರಿ ಫೀಡರ್ ಮಾರ್ಗಗಳನ್ನು ಹೊಸದಾಗಿ ನಿರ್ಮಾಣ ಮಾಡಿರುವುದರಿಂದ ಜೂನ್, 4 ರಂದು ಬೆಳಗ್ಗೆ 10 ರಿಂದ ಸಂಜೆ 4 ಗಂಟೆವರೆಗೆ ಮಕ್ಕಂದೂರು, ಕರ್ಣಂಗೇರಿ, ಮುಕ್ಕೊಡ್ಡು ಹಾಲೇರಿ, ರಾಜೇಶ್ವರಿನಗರ, ಬೋಯಿಕೇರಿ, ಇನ್ನಿವಳವಾಡಿ, ಹಮ್ಮಿಯಾಲ, ಮುಟ್ಟು ಗ್ರಾಮಗಳಲ್ಲಿ ಹಾಗೂ ಸುತ್ತಮುತ್ತ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ಸಾರ್ವಜನಿಕರು ಸೆಸ್ಕ್ ಸಹಾಯಕ ಸಹಕರಿಸುವಂತೆ ಕಾರ್ಯನಿರ್ವಾಹಕ ಎಂಜಿನಿಯರ್ ಅಶೋಕ್ ಅವರು ಕೋರಿದ್ದಾರೆ.

error: Content is protected !!