fbpx

ಜೂ.22 ರಂದು ಕೋವಿಡ್-19 ಲಸಿಕಾ ಮೇಳ

ಮಡಿಕೇರಿ ಜೂ.21:-ಜಿಲ್ಲೆಯ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಜೂನ್, 22 ರಂದು ಲಸಿಕಾ ಮೇಳ ನಡೆಯಲಿದೆ.

ಈ ಲಸಿಕಾ ಮೇಳದಲ್ಲಿ ಲಸಿಕಾಕರಣಕ್ಕೆ ಬಾಕಿ ಇರುವ 12 ವರ್ಷ ಮೇಲ್ಪಟ್ಟ ವಯೋಮಾನದ ಮೊದಲನೇ ಹಾಗೂ ಎರಡನೇ ವರಸೆಗೆ ಬಾಕಿ ಇರುವ ಎಲ್ಲಾ ಫಲಾನುಭವಿಗಳು ಹಾಗೂ 60 ವರ್ಷ ಮೇಲ್ಪಟ್ಟ ಮುನ್ನೆಚ್ಚರಿಕೆ ಡೋಸ್‍ಗೆ ಬಾಕಿ ಇರುವ ಫಲಾನುಭವಿಗಳು ಕೋವಿಡ್ ಲಸಿಕೆಯನ್ನು ಹಾಕಿಸಿಕೊಳ್ಳುವಂತೆ ಜಿಲ್ಲಾಡಳಿತ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅವರು ತಿಳಿಸಿದ್ದಾರೆ.

error: Content is protected !!