ಜುಲೈ 5 ರವರೆಗೆ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಚಟುವಟಿಕೆ ಇಲ್ಲ

ಲಾಕ್ ಡೌನ್ ದಿನಗಳಲ್ಲಿಯೂ ಪ್ರವಾಸಿಗರು ಜಿಲ್ಲೆಗೆ ಬರುತ್ತಿರುವ ದೂರುಗಳು ಬಂದಿರುವ ಹಿನ್ನಲೆಯಲ್ಲಿ
ಜುಲೈ 5 ನವರೆಗೆ ಕೊಡಗಿನಲ್ಲಿ ಲಾಕ್ ಡೌನ್ ಇರುವ ಕಾರಣ ಯಾವುದೇ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಅವಕಾಶ ಇರುವುದಿಲ್ಲ.ಜಿಲ್ಲೆಯಲ್ಲಿನ ಹೋಂಸ್ಟೇ, ರೆಸಾಟ್೯, ಲಾಡ್ಜ್ ಗಳಲ್ಲಿ ಪ್ರವಾಸಿಗರಿಗೆ ಅವಕಾಶ ನೀಡಿದ ದೂರುಗಳು ಇದ್ದಲ್ಲಿ ಜಿಲ್ಲಾಡಳಿತದ ಸಹಾಯವಾಣಿ ಸಂಖ್ಯೆ 1077 ಗೆ ಕರೆ ಮಾಡಲು ಸೂಚನೆ ನೀಡಲಾಗಿದ್ದು ಈ ನಿಟ್ಟಿನಲ್ಲಿ ಪ್ರವಾಸೋದ್ಯಮ, ಪೊಲೀಸ್, ಕಂದಾಯ ಇಲಾಖೆಗಳು ಕಾಯ೯ಪಡೆ ರಚಿಸಿದ್ದೇವೆ.

ಸಮಪ೯ಕವಾಗಿ ಕಾಯ೯ನಿವ೯ಹಿಸುತ್ತಿದೆ. ಈಗಾಗಲೇ 3 ಹೋಂಸ್ಟೇ ಮೇಲೆ ಧಾಳಿ ಮಾಡಿ ಎಫ್ ಐ ಆರ್ ದಾಖಲಿಸಿದ್ದೇವೆ. 1 ರೆಸಾಟ್೯ ಮೇಲೂ ದೂರು ಬಂದಿದೆ. ಪರಿಶೀಲಿಸುತ್ತೇವೆ.ಪ್ರವಾಸಿಗರಿಗೆ ಅವಕಾಶ ನೀಡಿದ ಮಡಿಕೇರಿಯ ಹೋಂಸ್ಟೇ ವಿರುದ್ದ ಕ್ರಮ ಕೈಗೊಳ್ಳಲಾಗಿದೆ.

error: Content is protected !!