ಜುಲೈ 5ರವರೆಗೆ ಜಿಲ್ಲೆಯಲ್ಲಿ ಲಾಕ್ಡೌನ್ ಮುಂದುವರಿಕೆ

ಸರ್ಕಾರದಿಂದ ಅನ್ ಲಾಕ್ ಮಾಡುವುದರ ಬಗ್ಗೆ ಯಾವುದೇ ಸ್ಪಷ್ಟ ನಿರ್ದೇಶನ ಬಾರದಿರುವ ಹಿನ್ನಲೆಯಲ್ಲಿ.
ಕೊಡಗು ಜಿಲ್ಲೆಯಲ್ಲಿ ಜುಲೈ 5 ರ ವರೆಗೆ ಲಾಕ್ ಡೌನ್ ಮುಂದುವರಿಯಲಿದೆ ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಸ್ಷಷ್ಟಪಡಿಸಿದ್ದಾರೆ.
ಈ ಹಿಂದಿನಂತೆ ವಾರದ ಮೂರು ದಿನ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಮುಂದುವರೆಯಲಿದ್ದು
ಬೆಳಗ್ಗೆ 6 ರಿಂದ 1 ಗಂಟೆಯ ವರೆಗೆ ಇರಲಿದೆ.
ಜಿಲ್ಲೆಯಲ್ಲಿ ಇಂದಿಗೂ ಕೊರೋನಾ ಕಂಟ್ರೋಲ್ ಬರದ ಹಿನ್ನೆಲೆಯಲ್ಲಿ ಜುಲೈ 5 ರ ವರೆಗೂ ಲಾಕ್ ಡೌನ್ ಮುಂದುವರಿಕೆಯಾಗಲಿದ್ದು
ಜಿಲ್ಲೆಯ ಜನರು ಯಾವುದೇ ಗೊಂದಲಕ್ಕೆ ಒಳಗಾಗದೆ ಲಾಕ್ ಡೌನ್ ನಿಯಮ ಪಾಲಿಸುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.

error: Content is protected !!