ಜೀವನದಿ ಕ್ಷೇತ್ರದಲ್ಲಿ ಇನ್ನೂ ಮಾಸಲಿಲ್ಲ 2020ರ ವಿಕೋಪದ ಛಾಯೆ: ಆತಂಕ ಬೇಡ ಎನ್ನುತ್ಥಿದಾರೆ ತಜ್ಞರು!!!

ವಿಶೇಷ ವರದಿ:ಗಿರಿಧರ್ ಕೊಂಪುಳೀರ

ಮೇ ಮುಗಿತಾ ಬಂತು, ಅತ್ತ ತೌಕ್ತೆ ಚಂಡಮಾರುತದಿಂದ ಹೆಚ್ಚಾಗಿರುವ ಕೊಡಿನವರ ಚಂಡ ಮದಾರುತ ಹವಮಾನ ಇಲಾಖೆ ಹೇಳಿದಂತೆ ಯಾಶ್ ಚಂಡಮಾರುತದ ಜೊತೆ ಕೇರಳಕ್ಕೆ ಜೂನ್ ಮೊದಲ ವಾರಕ್ಕೆ ಮುಂಗಾರು ಪ್ರಶೇಶಿಸಲಿದ್ದು ರಾಜ್ಯದ ಜನತೆ ಅದರಲ್ಲೂ ಸತತ ಮೂರು ವರ್ಷದಿಂದ ಜಿಲ್ಲೆಯ ಉದ್ದಗಲದಲ್ಲೂ ಗುಡ್ಡಕುಸಿತ, ಆಸ್ತಿಪಾಸ್ತಿ ನಷ್ಟ,ಪ್ರಾಣ ಹಾನಿ ಜೊತೆಗೆ ಕೊರೊನಾ ಕೊಡಗಿನವರ ಬದುಕನ್ನು ಹೈರಾಣಾಗಿಸಿದೆ. ಮೂರು ವರ್ಷಗಳಿಂದ ಇನ್ನೇನು ಚೇತರಿಯಸಿಕೊಳ್ಳಬೇಕು ಎನ್ನುವಷ್ಟರಲ್ಲೇ ಜೀವನದಿಯ ಉಗಮಸ್ಥಾನ ತಲಕಾವೇರಿಯಲ್ಲಿ ನಡೆದ ಘಟನೆ ನೆನೆಸಿಕೊಂಡರೆ ಭಯವಾಗುತ್ತಿದೆ. ಗಜಗಿರಿ ಬೆಟ್ಟ ಕುಸಿದರ ಪರಿಣಾಮ ಆರ್ಚಕ ಕುಟುಂಬ ಸೇರಿದಂತೆ ಐವರು ಬಲಿಯಾದರೆ, ಬೆಟ್ಟದ ತಪ್ಪಲಿನ ಗ್ರಾಮಗಳು ತನ್ನ ಸ್ವರೂಪವನ್ನೇ ಬದಲಿಸಿಕೊಂಡಿದ್ದವು ಅದರಲ್ಲೂ ಚೇರಂಗಾಲದವರ ಪಾಡು ಹೇಳ ತೀರದು. ಇಲ್ಲಿನವರಿಗೆ ಮಳೆಗಾಲದಲ್ಲಿ ಮುಳುಗಡೆಯಾಗುವುದು ಹೊಸತೇನಲ್ಲ.

ವಾರ್ಷಿಕವಾಗಿ 230 ಇಂಚು ಮಳೆ ಬೀಳುವ ಈ ಪ್ರದೇಶದಲ್ಲಿ 2020ರ ಮಳೆಯ ದುರಂತ ಇನ್ನೂ ನೆನ್ನಮೂನ್ನೆ ನಡೆದಂತಿದೆ. ಇಲ್ಲಿ ಗುಡ್ಡಕುಸಿತಕ್ಕಿಂತ ಹೆಚ್ಚಾದ ಪರಿಣಾಮ ಕೊಚ್ಚಿಬಂದ ಮರಗಳಿಂದ ಭಾಗಮಂಡಲದ ಗ್ರಾಮಪಂಚಾಯ್ತಿಯ ಚೇರಂಗಾಲದ ಪ್ರಮುಖ ಸೇತುವೆಗಳಾದ ಮೂಲೆಮಜಲು, ಕೋಡಿ, ಹೊಸೂರು, ಕೊಡಕಂಡಿ, ಸಿರಕಜೆ ಸೇರಿದಂತೆ ಸಣ್ಣಪುಟ್ಟ ಹತ್ತಕ್ಕೂ ಹೆಚ್ಚು ಸೇತುವೆಗಳು ಕೊಚ್ಚಿಹೋಗಿದ್ದು ಇಂದಿಗೂ ಅದರ ಪರ್ಯಾಯ ವ್ಯವಸ್ಥೆ ಮಾಡಿಲ್ಲ, ಬದಲಾಗಿ ಗ್ರಾಮಸ್ಥರೇ ಮರದ ಕಾಲು ಸೇತುವೆ ಮಾಡಿಕೊಂಡು ಓಡಾಡುತ್ತಿದ್ದಾರೆ. ಆದರೆ ಮತ್ತೆ ಈ ಭಾಗದಲ್ಲಿ ಅನಾಹುತಗಳು ಸಂಭವಿಸಿದಲ್ಲಿ ರಕ್ಷಣಾ ತಂಡಗಳು ತೆರಳುವುದಕ್ಕೂ ಸಾಧ್ಯವಾಗದ ಪರಿಸ್ಥಿತಿಯಲ್ಲಿದೆ. ಸ್ಥಳಕ್ಕೆ ಅಧಿಕಾರಿಗಳು ಬಂದು ಹೋಗಿದ್ದಾರೆ,ವರದಿಯನ್ನೂ ಸಂಗ್ರಹಿಸಿದ್ದಾರೆ, ಹೂಳೆತ್ತುವುದಾಗಲಿ, ಸೇತುವೆ ರಸ್ತೆ ನಿರ್ಮಿಸುವುದಾಗಲಿ ಯಾವುದೇ ಪ್ರಗತಿ ಇಲ್ಲಿವರೆಗೆ ಕಂಡಿಲ್ಲ.

ಇನ್ನು ಬ್ರಹ್ಮಗಿರಿ ಬೆಟ್ಟ, ಗಜಗಿರಿ ಬೆಟ್ಟ ಕುಸಿತದಂತೆ ಈ ಬಾರಿ ಮತ್ತೆ ಸಂಭವಿಸುವುದಿಲ್ಲ, ಬದಲಾಗಿ ಸಣ್ಣಪುಟ್ಟ ಕುಸಿತಗಳು ಕಾಣಬಹುದು ಆದರೆ ಅಪಾಯಗಳು ಇರುವುದು ಬಹತೇಕ ಕಡಿಮೆ ಎಂದು ಕೆಲವು ಭೂ ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ. ಭೂಕಂಪ, ಭೂಕುಸಿತ, ಜ್ವಾಲಾಮುಖಿಗಳು ಒಂದು ಭಾಗದಲ್ಲಿ ಸಂಭವಿಸದರೆ ಮತ್ತೊಂದು ಬಾರಿ ಬೇರೆಡೆ ಸಂಭವಿಸುತ್ತವೆ. ಭಾರೀ ಮಳೆಗೆ ಕೆಲವೊಂದು ನೀರಿನ ಪ್ರಮಾಣ ಹೆಚ್ಚಾದರೂ ಮೇಲ್ಮೈ ಮಾತ್ರ ಕೊರೆಯುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಈಗಾಗಲೇ ತತ್ತರಿಸಿಹೋಗಿರುವ ಇಲ್ಲಿನ ಮಂದಿಗೆ ರಾತ್ರಿ ಬೆಳಗಾಗುವುದರೊಳಗೆ ಏನು ಆಗಿಬಿಡುತ್ತದೋ ಎನ್ನುವ ಜೀವ ಭಯ ಎ
ಇರುವುದಂತೂ ಸತ್ಯ.

error: Content is protected !!