fbpx

ಜೀವಂತ ನವಿಲು ಮಾರಾಟಕ್ಕೆ ಯತ್ನಿಸಿದ ಇಬ್ಬರ ಬಂಧನ

ಮಡಿಕೇರಿ : ಜೀವಂತ ನವಿಲು ಮಾರಾಟ ಮಾಡುತ್ತಿದ್ದ ಇಬ್ಬರನ್ನು ಸಿಐಡಿ ಪೊಲೀಸ್ ಅರಣ್ಯ ಘಟಕ ಸಿಬ್ಬಂದಿ ಬಂಧಿಸಿದ್ದಾರೆ. ಜೆ.ಎಂ. ಕಾರ್ತಿಕ್ ಮತ್ತು ಎಸ್. ಎಚ್. ಹರೀಶ್ ಬಂಧಿತ ಆರೋಪಿಗಳು. ಸುಂಟಿಕೊಪ್ಪ ರಸ್ತೆಯ ಖಾಸಗಿ ರೆಸಾರ್ಟ್ ಬಳಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಸಂದರ್ಭ ದಾಳಿ ನಡೆಸಿದ ಸಿಬ್ಬಂದಿ ನವಿಲು ಸಮೇತ ಇಬ್ಬರನ್ನು ಬಂಧಿಸಿದ್ದಾರೆ. ಅರಣ್ಯ ಸಂಚಾರಿ ಘಟಕದ ಪಿಎಸ್‌ಐ ಸಿ.ಯು. ಸವಿ, ಸಿಬ್ಬಂದಿ ಶೇಖರ್, ರಾಜೇಶ್, ರಾಘವೇಂದ್ರ, ಯೋಗೇಶ್, ಮೋಹನ್, ಸ್ವಾಮಿ, ಮಂಜುನಾಥ್ ಕಾರ್ಯಾಚರಣೆಯಲ್ಲಿದ್ದರು.

error: Content is protected !!