ಜೀಪ್ ಬ್ರೇಕ್ ಫೇಲಿಂದ ಸರಣಿ ಅಪಘಾತ!

ಕೊಡಗು:ವಿರಾಜಪೇಟೆ ಪಟ್ಟಣದ ಮಾಂಸ ಮಾರುಕಟ್ಟೆಯ ಇಳಿಜಾರಿನಲ್ಲಿ ಜೀಪೊಂದು ಬ್ರೇಕ್ ವೈಫಲ್ಯದಿಂದ ಸರಣಿ ಅಪಘಾತ ನಡೆಸಿದ ಘಟನೆ ನಡೆದಿದೆ.
ಖಾಸಗಿ ಬಸ್ ನಿಲ್ದಾಣದಿಂದ ಗೋಣಿಕೊಪ್ಪ ರಸ್ತೆಗೆ ಸಂಪರ್ಕ ಕಲ್ಪಿಸುವ ಇಳಿಜಾರಿನಲ್ಲಿ ಜೀಪು ಮೂದಲು ಬೈಕೊಂದಕ್ಕೆ ಡಿಕ್ಕಿ ಹೊಡೆದಿದೆ,ಬಳಿಕ ಒಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಮುರಿದು ಬಿದ್ದಿದ್ದು ಬಳಿಕ ಮತ್ತೊಂದು ಕಂಬಕ್ಕೆ ಡಿಕ್ಕಿ ಹೊಡೆದು ನಿಂತಿದೆ.ಘಟನೆಯಲ್ಲಿ ಬೈಕ್ ಸವಾರನಿಗೆ ಗಾಯಗಳಾಗಿದ್ದು, ಚಾಲಕನ ನಿರ್ಲಕ್ಷ್ಯ ಕಾರಣಕ್ಕೆ ವಿರಾಜಪೇಟೆ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಘಟನೆ ಸಂಪೂರ್ಣ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ವೈರಲ್ ಆಗಿದೆ.