ಜಿಲ್ಲೆಯ ಯುವ ಪ್ರತಿಭೆಗಳಿಗೆ ಬೇಕಿದೆ ಪ್ರೋತ್ಸಾಹ ಪ್ರಶಂಸೆ…!

ಕೊಡಗಿನ ಯುವಕರಾದ ಅಂಜೇರಿರಾ ವಿಶು ರಾಘವಯ್ಯ, ಜೀವನ್ ಅಚ್ಚಲ್ಪಾಡಿ ಮತ್ತು ಬಳಗ ಮಾಡಿದ್ದ ಹಾಡು ‘ರಾಣಿ ನೀ’ ನೆಟ್ಟಿಗರ ಬಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಕೊಡಗಿನಲ್ಲಿ ಸಂಗೀತಕ್ಕೆ ಇನ್ನೂ ಜನ ಬೆಂಬಲ ಕೊಡಗು ಜಿಲ್ಲೆಯಲ್ಲಿ ಬೇಕಾಗಿದೆ.
ಈಗಾಗಲೇ ಹಾಡು ಎಲ್ಲೆಡೆ ವೈರಲ್ ಆಗಿದ್ದು, ಅರೆಭಾಷೆಯ ಈ ಹಾಡು ಕೇಳಲು ತುಂಬಾ ಇಂಪಾಗಿದೆ. ಕೊಡಗಿನಲ್ಲಿ ಪ್ರಾದೇಶಿಕ ಭಾಷೆ, ಸಂಸ್ಕೃತಿಗಳನ್ನು ಉಳಿಸಲು ಇಂತಹ ಸೃಜನಾತ್ಮಕ ಪ್ರಯತ್ನಗಳು ಆಗಿಂದಾಗ್ಗೆ ಆಗುತ್ತಿರಬೇಕು. ಅದಕ್ಕೆ ಜನರ ಬೆಂಬಲ, ಪ್ರೋತ್ಸಾಹ, ಪ್ರಶಂಸೆಯ ಅಗತ್ಯತೆಯು ಅತಿ ಹೆಚ್ಚಿರುತ್ತದೆ.