ಜಿಲ್ಲೆಯ ಜಾನಪದ ಕಲಾಸಕ್ತರಿಗಾಗಿ ಆನ್ ಲೈನ್ ಮುಂಗಾರು ಜಾನಪದ ಕಲರವ -2021

ಕೊಡಗು: ಜಾನಪದ ಪರಿಷತ್ತಿನ ಪೊನ್ನಂಪೇಟೆ ತಾಲೂಕು ಘಟಕ ದ ವತಿಯಿಂದ ಮುಂಗಾರು ಜಾನಪದ ಕಲರವ -2021 ಎಂಬ ಹೆಸರಿನ ಆನ್ ಲೈನ್ ಸ್ಪರ್ಧೆಯನ್ನು ಆಯೋಜಿಸಲು ಉದ್ದೇಶಿಸಲಾಗಿದೆ.

ಇದರ ಭಾಗವಾಗಿ ಮನೆಗಳಲ್ಲಿರುವ ಪುರಾತನ ಪರಿಕರಗಳನ್ನು ಚಿತ್ರೀಕರಿಸಿ ಕಳುಹಿಸುವ ಕೊಡಗು ಜಿಲ್ಲಾ ಮಟ್ಟದ ಪ್ರದರ್ಶನ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.

ಈ ಸ್ಪರ್ಧೆಯಲ್ಲಿ ಸಾರ್ವಜನಿಕರೂ ಸೇರಿದಂತೆ ಜಿಲ್ಲೆಯಲ್ಲಿರುವ ಜಾನಪದ ಪರಿಷತ್ತಿನ ಎಲ್ಲಾ ಘಟಕದ ಪದಾಧಿಕಾರಿಗಳಿಗೆ ಮುಕ್ತವಾಗಿರುತ್ತದೆ. (ಪೊನ್ನಂಪೇಟೆ ತಾ.ಜಾ.ಪ ಘಟಕದ ಪದಾಧಿಕಾರಿಗಳನ್ನು ಹೊರತುಪಡಿಸಿದಂತೆ).

ಪ್ರದರ್ಶನ ಸ್ಪರ್ಧೆಯ ಷರತ್ತುಗಳು

. ವೀಡಿಯೊ ರೂಪದಲ್ಲಿ ಪರಿಕರಗಳನ್ನು ವಿಡಿಯೋ ಚಿತ್ರೀಕರಣ ಗೊಳಿಸಿ ಸೂಕ್ತ ವಿವರಣೆಯೊಂದಿಗೆ ಪ್ರದರ್ಶಿಸಿ ಕಳಿಸಬೇಕು.

. ವೀಡಿಯೋ ದಲ್ಲಿ ಸ್ಪರ್ಧಿಯು ನೀಡುವ ಜಾನಪದೀಯ ವಿಶ್ಲೇಷಣೆಗೆ ಮತ್ತು ಪರಿಕರಗಳ ಸೌಂದರ್ಯಕ್ಕೆ ಪ್ರತ್ಯೇಕ ಏಕ ಗಳಿರುವುದರಿಂದ ಚಿತ್ರೀಕರಣ ಸಂದರ್ಭದ ನಿರೂಪಣೆಯಲ್ಲಿ ನಿರಂತರತೆಯನ್ನು ಹೊಂದಿರಬೇಕು.

. ವೀಡಿಯೋ ಮತ್ತು ಆಡಿಯೋ ಸ್ಪಷ್ಟವಾಗಿರಬೇಕು. ವಿವರಣೆ ಕಡ್ಡಾಯವಾಗಿ ಕನ್ನಡದಲ್ಲಿ ಇರಬೇಕು.

. ವಿಡಿಯೋ ಚಿತ್ರೀಕರಣದ ಸಮಯದ ಮಿತಿ ಕನಿಷ್ಟ 2 ನಿಮಿಷಗಳು, ಗರಿಷ್ಠ 3 ನಿಮಿಷಗಳು ಮೀರದಂತಿರಬೇಕು.

. ವೀಡಿಯೋ ನೈಜವಾಗಿರಬೇಕು ಮತ್ತು ಯಾವುದೇ ಎಡಿಟಿಂಗ್ ಗೆ ಒಳಪಟ್ಟಿರಬಾರದು.

. ಪರಿಕರಗಳು ಹಳೆಯ, ನೈಜ ಮತ್ತು ಸಹಜ ಸ್ಥಿತಿಯಲ್ಲಿರಬೇಕು. ಯಾವುದೇ ಕೃತಕತೆ ಕಂಡುಬಂದರೆ ವಿಡಿಯೋವನ್ನು ಸ್ಪರ್ಧೆಯಿಂದ ಅನರ್ಹಗೊಳಿಸಲಾಗುವುದು.

. ಸ್ಪರ್ಧಿಯು ಸ್ವತಃ ವೀಡಿಯೋದಲ್ಲಿರಬೇಕು ಮತ್ತು ವೀಡಿಯೋದಲ್ಲಿ ತಮ್ಮ ಸ್ವಪರಿಚಯವನ್ನು ಮಾಡಿಕೊಂಡಿರಬಾರದು.

. ಸ್ಪರ್ಧಿಯ ಸ್ವವಿವರವನ್ನು ವೀಡಿಯೋ ಕಳುಹಿಸುವ ವಾಟ್ಸಾಪ್ ಮೊಬೈಲ್ ಸಂಖ್ಯೆಗೆ ಸಂದೇಶದ ರೂಪದಲ್ಲಿ (text message) ಕಳುಹಿಸಿಕೊಡಬೇಕು.

. ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಒಬ್ಬರಿಗೆ ಒಂದೇ ಅವಕಾಶವಿದ್ದು, ನಿರ್ದಿಷ್ಟ ಅವಧಿಯ ವೀಡಿಯೋವನ್ನು ಈ ಕೆಳಗೆ ನೀಡಲಾದ ಮೊಬೈಲ್ ಸಂಖ್ಯೆ ಗೆ ತಲುಪಬೇಕು.

. ಸ್ಪರ್ಧೆಗೆ ಮುಂಗಡವಾಗಿ ಯಾವುದೇ ನೋಂದಣಿಯ ಅವಶ್ಯಕತೆ ಇರುವುದಿಲ್ಲ.

. ಅತ್ಯುತ್ತಮವೆಂದು ಕಂಡುಬರುವ 3 ವಿಡಿಯೋ ಪ್ರದರ್ಶನಗಳಿಗೆ ಕ್ರಮವಾಗಿ ಪ್ರಥಮ ದ್ವಿತೀಯ ಮತ್ತು ತೃತೀಯ ಬಹುಮಾನ ನೀಡಲಾಗುವುದು.

. ಸ್ಪರ್ಧೆಗೆ ಸಂಬಂಧಿಸಿದಂತೆ ನಿರ್ಣಾಯಕರ ತೀರ್ಪು ಅಂತಿಮವಾಗಿರುತ್ತದೆ.

ವೀಡಿಯೋ ಕಳುಹಿಸಲು ಕೊನೆಯ ದಿನಾಂಕ ಮತ್ತು ಸಮಯ: 17/06/2021 ರ ಮಧ್ಯ ರಾತ್ರಿ 12.00 ಗಂಟೆ.

ಕಳುಹಿಸಬೇಕಾದ ಸಂಖ್ಯೆ:96116 40552

ನಿರ್ದಿಷ್ಟಾವಧಿಯ ನಂತರದ ಬರುವ ವೀಡಿಯೋಗಳನ್ನು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ ಎಂದು ಪೊನ್ನಂಪೇಟೆ ತಾಲೂಕು ಜನಪದ ಪರಿಷತ್ ಘಟಕದ ಗೌ.ಕಾರ್ಯದರ್ಶಿಗಳು ತಿಳಿಸಿರುತ್ತಾರೆ.

error: Content is protected !!