|ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿ|ಎಲ್ಲೆಲ್ಲೂ ಕಟ್ಟೆಚ್ಚರ|


ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆತ ಪ್ರಕರಣ ಸಂಬಂಧ ಆಗಸ್ಟ್ 26 ರಂದು ಕರೆಯಲಾಗಿದ್ದ ಕಾಂಗ್ರೆಸ್ ಪಾದಯಾತ್ರೆ ಮತ್ತು ಅದೇ ದಿನ ಕೌಂಟರ್ ನೀಡಲು ಜನಜಾಗೃತಿ ಸಮಾವೇಶಕ್ಕೆ ಬಿಜೆಪಿಯ ತಂತ್ರಕ್ಕೆ ಜಿಲ್ಲಾಡಳಿತ ನಿಷೇಧಾಜ್ಞೆ ಹೇರುವ ಮೂಲಕ ತಡೆ ನೀಡಿದ್ದು ,ಇಂದಿನಿಂದಲೇ 144 ಸೆಕ್ಷನ್ ಜಾರಿ ಮಾಡಲಾಗದೆ.

ಸಾರ್ವಜನಿಕ ಕಾರ್ಯಕ್ರಮ ನಿರ್ಬಂಧ ಮತ್ತು ಮದ್ಯ ಮಾರಾಟವನ್ನು ಮೂರು ದಿನದ ಮಟ್ಟಿಗೆ ನಿಷೇಧ ಹೇರಿದ್ದು, ಜನಜೀವನ ಎಂದಿನಂತೆ ಸಹಜವಾಗಿಯೇ ಇದೆ. ಜಿಲ್ಲೆಯ ಎಲ್ಲಾ ಗಡಿ ಭಾಗದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಸಾರಿಗೆ ಬಸ್ಸು, ಆಟೋಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿದ್ದು, ಜಿಲ್ಲೆಯ ಕೆಲವು ಸೂಕ್ಷ್ಮ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.