ಜಿಲ್ಲೆಯಾದ್ಯಂತ ಸಂಭ್ರಮದ ಷಷ್ಠಿ ಉತ್ಸವ

ಕೊಡಗು:ಸುಬ್ರಮಣ್ಯ ಷಷ್ಠಿ ಪ್ರಯುಕ್ತ ಕೋವಿಡ್ ನಿಯಮದ ಅಡಿಯಲ್ಲೇ ಉತ್ಸವಗಳು ಜರುಗಿದವು,
ಮಡಿಕೇರಿಯ ಸುಬ್ರಮಣ್ಯ ದೇವಸ್ಥಾನದ ವಾರ್ಷಿಕೋತ್ಸ ಮತ್ತು ಷಷ್ಠಿ ಮಹೋತ್ಸವದ ಪ್ರಯುಕ್ತ ದೇವರ ಸನ್ನಿಧಾನದಲ್ಲಿ ಮುಂಜಾನೆ 5 ಗಂಟೆಗೆ ಪ್ರಾರಂಭವಾದ ಪೂಜಾ ವಿಧಿ ವಿಧಾನ, ದೇವರ ಪ್ರಾರ್ಥನೆ – ಬಲಿಯೊಂದಿಗೆ ಮಹಾಪೂಜೆಯು ಸಾಂಕೇತಿಕವಾಗಿ ಜರುಗಿತು
ಸಾವಿರಾರು ಭಕ್ತರು ಆಗಮಿಸಿ ಪ್ರಸಾದ ಸ್ವೀಕರಿಸಿ ದೇವರ ಕೃಪೆಗೆ ಪಾತ್ರರಾದರು,
ನಂತರ ಆಗಮಿಸಿದ ಎಲ್ಲ ಭಕ್ತರಿಗೂ ಅನ್ನಧಾನ ಏರ್ಪಡಿಸಲಾಗಿತ್ತು,ಕೊಡಿಗೆಯಲ್ಲಿನ ಸುಬ್ರಮಣ್ಯ ದೇವಾಲಯದಲ್ಲಿ ಪ್ರತೀ ವರ್ಷ ನಡೆಯುತ್ತಿದ್ದ ರಥೋತ್ಸವ ಮತ್ತು ಜಾತ್ರೆ,ಅನ್ನಧಾನಕ್ಕೆ ಬ್ರೇಕ್ ನೀಡಲಾಗಿದ್ದು ರಥವನ್ನು ದೇವಾಲಯದ ಸಮೀಪವೇ ಆಚರಿಸಲಾಯಿತು,ಕುಶಾಲನಗರದ ಉದ್ಬವ ಸುಬ್ರಮಣ್ಯ ದೇವಾಲಯದಲ್ಲಿ ಶನಿವಾರವೇ ಧ್ವಜಾರೋಹಣ ಮೂಲಕ ಚಾಲನೆ ನೀಡಲಾಗಿದ್ದು,ಇಂದು ಪೂಜೆ ಹೋಮ ಹವನ ನಡೆದವು.ಬೈರಂಬಾಡದಲ್ಲಿ ಸರತಿ ಸಾಲಿನಲ್ಲಿ ಭಕ್ತರು ಆಗಮಿಸಿ ದೇವರ ಕೃಪೆಗೆ ಪಾತ್ರರಾದರು,ಗೋಣಿಕೊಪ್ಪದ ಉಮಾಮಹೇಶ್ವರಿ,ಬೆಟ್ಟತ್ತೂರಿನ ಪುರಾಣ ಪ್ರಸಿದ್ದ ದೇವಾಲಯದಲ್ಲಿ ವಿಶೇಷ ಪೂಜೆ ಕೈಂಕಾಯ್ರಗಳು ಜರುಗಿದವು.

error: Content is protected !!