fbpx

ಜಿಲ್ಲೆಯಲ್ಲಿ ಮುಂದುವರಿದ ಮಳೆ: ಜನಜೀವನ ಅಸ್ಥವ್ಯಸ್ತ

ಇನ್ನೂ ಎರಡು ದಿನ ಭಾರಿ ಮಳೆ ಮುಂದುವರಿಯುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು ಗಾಳಿ – ಮಳೆಗೆ ವಿರಾಜಪೇಟೆಯ ಚಿಕ್ಕಪೇಟೆಯಲ್ಲಿ 6 ವಿದ್ಯುತ್ ಕಂಬಗಳು ನೆಲಕ್ಕುರುಳಿದಿದ್ದು, 11 ಕೆ.ವಿ ವಿದ್ಯುತ್ ಮಾರ್ಗ ಕಡಿತವಾದ ಹಿನ್ನೆಲೆ ಕಡಂಗ, ಬೋಯಿಕೇರಿ ವ್ಯಾಪ್ತಿಯಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.

ಮಡಿಕೇರಿಯ ಕಡಗದಾಳು, ವಿರಾಜಪೇಟೆಯ ಟಿ.ಶೆಟ್ಟಿಗೇರಿ, ಬಿ.ಶೆಟ್ಟಿಗೇರಿಯಲ್ಲಿ 120 ಮಿ.ಮೀ, ಕಡಗದಾಳು ಗ್ರಾ.ಪಂ ವ್ಯಾಪ್ತಿಯಲ್ಲಿ 124.5 ಮಿ.ಮೀ, ಟಿ.ಶೆಟ್ಟಿಗೇರಿಯಲ್ಲಿ 129.5 ಮಿ.ಮೀ, ಬಿ.ಶೆಟ್ಟಿಗೇರಿಯಲ್ಲಿ 124.5 ಮಿ.ಮೀ ಮಳೆ ದಾಖಲಾಗಿದೆ.

ಹಾರಂಗಿ ಜಲಾಶಯಕ್ಕೆ 10981 ಕ್ಯೂಸೆಕ್ ನೀರು ಒಳಹರಿವು 11125 ಕ್ಯೂಸೆಕ್ ನೀರು ನದಿಗೆ ಬಿಡುಗಡೆ ಮಾಡಲಾಗಿದೆ.

error: Content is protected !!