fbpx

ಜಿಲ್ಲೆಯಲ್ಲಿ ಮಳೆ ಅಬ್ಬರ ಜೋರು!

ಮಳೆಗಾಲದ ಸಚಿತ್ರ ವರದಿ

ಕೊಡಗಿನಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಸಾಕಷ್ಟು ಪ್ರದೇಶಗಳು ಮುಳುಗಡೆಯಾದರೆ, ಕೆಲವೆಡೆ ಭೂಕುಸಿತದಂತಹ ಘಟನೆ ನಡೆದಿದೆ.

ಕಾವೇರಿ ನದಿ ನೀರಿನ ಹೆಚ್ಚಳದಿಂದ ಬೇತ್ರಿ ಮತ್ತು ಬಲಮುರಿಯಲ್ಲಿ ಹರಿಯುತ್ತಿರುವ ಭರಪೂರ ನೀರಿನ ಹರಿವು.

ಕಾವಾಡಿಯಲ್ಲಿ ಕಾಫಿ ತೋಟಕ್ಕೆ ನುಗ್ಗಿದ ನೀರು ನಿಂತಿರುವ ದೃಶ್ಯ

ಮೂರ್ನಾಡ್, ನಾಪೊಕ್ಲು, ಬಲಂಬೇರಿ ಜಲಾವೃತವಾದ ದೃಶ್ಯ

ಬಾಡಗ ಬಾಣಂಗಾಲದಲ್ಲಿ ಅಜೀಜ್ ಎಂಬುವವರ ಮನೆ ಗೋಡೆ ಕುಸಿದು ಬಿದ್ದು ಹೋಗಿರುವ ದೃಶ್ಯ

ಲಕ್ಷ್ಮಣತೀರ್ಥ ನದಿ ಪ್ರವಾಹದಿಂದ ಶ್ರೀಮಂಗಲ ಗ್ರಾಮಾಂತರ ರಸ್ತೆ ಸಂಪರ್ಕ ಬಂದ್

ದಕ್ಷಿಣ ಕೊಡಗಿನ ಶ್ರೀಮಂಗಲದಲ್ಲಿ ರಸ್ತೆ ಮುಳುಗಡೆ

ಕುಶಾಲನಗರದ ಕೊಪ್ಪ ಸೇತುವೆ ಬಳಿ ಕಾವೇರಿ ನದಿಯ ದೃಶ್ಯ

ಕುಂಜಿಲ ಪೈನರಿ ರಸ್ತೆ ಜಲಾವೃತಗೊಂಡಿರುವುದು

ಮಾದಾಪುರದ ಭಾಗದಿಂದ ಹಾರಂಗಿ ಜಲಾಶಯಕ್ಕೆ ಹರಿದು ಬರುತ್ತಿರುವ ನೀರು

ಅಯ್ಯಂಗೇರಿ ಚಿನ್ನತಪ್ಪ ದೇವಾಲಯ ಬಳಿ ಮನೆ ಮೇಲೆ ಬರೆ ಕುಸಿತ

ಮಳೆಯ ತೀವ್ರತೆಗೆ ಐಕೊಳ ಗ್ರಾಮದಲ್ಲಿ ಅಪಾಯದಂಚಿನಲ್ಲಿರುವ 11 ಕೆ.ವಿ ವಿದ್ಯುತ್ ಕಂಬ

ಜಿಲ್ಲಾಡಳಿತದಿಂದ ಎಲ್ಲಾ ಗ್ರಾಮಗಳಲ್ಲೂ ಸರಕಾರಿ ಶಾಲೆಗಳಲ್ಲಿ ಕಾಳಜಿ ಕೇಂದ್ರವನ್ನು ತೆರೆಯಲಾಗಿದೆ.

ಭಾಗಮಂಡಲದಲ್ಲಿ ನದಿ ನೀರಿನ ಏರಿಕೆ, ಭಾಗಮಂಡಲ 120 ಹಾಗು ಗಾಳಿಬೀಡು 140 ಮಿಲಿ ಮೀಟರಿನಷ್ಟು ಮಳೆಯಾಗಿದೆ.

ಅರಪಟ್ಟುವಿನ ಕಡಂಗ ಎಡಪಾಲ ರಸ್ತೆ, ಸೇರುವೆ ಸಂಪೂರ್ಣ ಜಲಾಕ್ರಮಿತ

ಹಮ್ಮಿಯಾಲ ಮತ್ತು ಮುಕ್ಕೊಡ್ಲುವಿನಲ್ಲಿ ಗುಡ್ಡ ಕುಸಿತ ಮತ್ತು ನೆರೆ ಪೀಡಿತ ಪ್ರದೇಶಕ್ಕೆ ಶಾಸಕ ಅಪ್ಪಚ್ಚು ರಂಜನ್ ಭೇಟಿ ನೀಡಿ ವಾಸ್ತವ ಸ್ಥಿತಿ ಪರಿಶೀಲಿಸಿದರು.

error: Content is protected !!