ಜಿಲ್ಲೆಯಲ್ಲಿ ಮಳೆಯ ಆರ್ಭಟಕ್ಕೆ ಜನ ತತ್ತರ ಜೀವನ ದುಸ್ಥರ

ಕೊಡಗು ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರೆದಿದ್ದು ಅಪಾಯ ಮಟ್ಟ ಮೀರಿ ಕಾವೇರಿ ನದಿ ಉಕ್ಕಿ ಹರಿಯುತ್ತಿದೆ. ಮಳೆಯ ತೀವ್ರತೆ ಹಿನ್ನೆಲೆಯಿಂದ ಅಂಗನವಾಡಿ, ಶಾಲೆಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಆದೇಶಿಸಿದ್ದಾರೆ.
ಅಲ್ಲಲ್ಲಿ ರಸ್ತೆ ಕುಸಿತ,ಜಲಸ್ಪೋಟ ಮುಂದುವರೆದಿದ್ದು ಭಾಗಮಂಡಲ-ಕರಿಕೆ ನಡುವಿನ ರಸ್ತೆ ಮೇಲೆ ಜಲಪಾತಗಳಿಂದ ನೀರು ಉಕ್ಕಿ ಹರಿಯುವ ಮೂಲಕ ಸಂಚಾರಕ್ಕೆ ಅಡಚಣೆಯಾಗಿದೆ.
ಕಾವೇರಿ ಜಲಾನಯನದ ಪ್ರದೇಶದ ತಗ್ಗು ಭಾಗವಾದ ಗು,ಕರಡಿಗೋಡು ವ್ಯಾಪ್ತಿಯಲ್ಲಿ ಪ್ರವಾಹದ ಭೀತಿ ಎದುರಾಗಿದ್ದು, ನದಿ ಪಾತ್ರದ ನಿವಾಸಿಗಳನ್ನು ಕಾಳಜಿ ಕೇಂದ್ರಗಳಿಗೆ ವರ್ಗಾಯಿಸುವ ಕಾರ್ಯ ಜಿಲ್ಲಾಡಳಿತ ಮುಂದುವರೆಸಿದೆ.
ಕುಶಾಲನಗರದ ಕಾವೇರಿ ನದಿ ತಟದಲ್ಲಿ ಇರುವ ಸಾಯಿ ಬಡಾವಣೆ, ಕಾವೇರಿ ಬಡವಣೆಗೆ ನೀರು ನುಗ್ಗಿದೆ.
ಮಳೆ-ಗಾಳಿಯ ಪರಿಣಾಮ ವಿವಿಧ ಇಲಾಖೆಗೆ ಸೇರಿದಂತೆ ಪ್ರಸ್ತುತ ಅಂದಾಜು 232 ಕೋಟಿಯಷ್ಟು ನಷ್ಟವಾಗಿದ್ದು, ನಷ್ಟದ ವರದಿಯನ್ನು ಸರ್ಕಾರಕಕ್ಕೆ ಕಳುಹಿಸಲಾಗುತ್ತಿದ್ದು ಹೆಚ್ಚಿನ ನಷ್ಟ ಪರಿಹಾರದ ಅನುದಾನಕ್ಕೆ ಬೇಡಿಕೆ ಇಡಲಾಗಿದೆ.