fbpx

ಜಿಲ್ಲೆಯಲ್ಲಿ ಮತ್ತೊಂದು ಸಾಕಾನೆ ಶಿಬಿರ ಆರಂಭ ನಿರ್ಧಾರ: ಬಿರುಸುಗೊಂಡ ಕಾಮಗಾರಿ

ಕೊಡಗು ಜಿಲ್ಲೆಯಲ್ಲಿ ಮತ್ತೊಂದು ಸಾಕಾನೆ ಶಿಬಿರ ಆರಂಭಿಸಲು ಅರಣ್ಯ ಇಲಾಖೆ ನಿರ್ಧರಿಸಿದ್ದು ಕುಶಾಲನಗರ ಹೊರವಲಯದ ಹಾರಂಗಿ ಜಲಾಶಯದ ಬಲಭಾಗದಲ್ಲಿ 40 ಏಕರೆ ಜಾಗದಲ್ಲಿ ಕಾಮಗಾರಿ ಬಿರುಸುಗೊಂಡಿದೆ.

ಜಿಲ್ಲೆಯಲ್ಲಿ ವಿರಾಜಪೇಟೆಯ ಹುಣಸೂರು ಅರಣ್ಯ ವಿಭಾಗಕ್ಕೆ ಒಳಪಡುವ ಮತ್ತಿಗೋಡಿನ ಆನೆ ಶಿಬಿರ ಮತ್ತು ಕುಶಾಲನಗರ ಸಮೀಪದ ಪ್ರಮುಖ ಪ್ರವಾಸಿಗರ ಆಕರ್ಷಣೆಯ ಕೇಂದ್ರ ಬಿಂದುವಾಗಿರುವ ಕಾವೇರಿ ನದಿ ತಟದಲ್ಲಿರುವ ದುಬಾರೆ, ಮತ್ತು ಆನೆಕಾಡಿನ ಜೊತೆಗೆ ಹಾರಂಗಿ ಯಲ್ಲಿ 50 ಲಕ್ಷ ವೆಚ್ಚದ ಸಾಕಾನೆ ಶಿಬಿರದ ಕಾಮಗಾರಿ ಭರ್ಜರಿಯ ಸಾಗಿದೆ.

ಸಾಕಾನೆಗಳಿಗೆ ಆಹಾರ ಸಂಗ್ರಹದ ಕೊಠಡಿ, ಮಾವುತರು, ಕಾವಾಡಿಗಳಿಗೆ ವಾಸಿಸಲು ಮನೆ ನಿರ್ಮಾಣ ಸೇರಿದಂತೆ, ವಿದ್ಯುತ್, ರಸ್ತೆ ನಿರ್ಮಾಣ ಕಾರ್ಯ ಬಿರುಸುಗೊಂಡಿದೆ. ದುಬಾರೆ ಸಾಕಾನೆ ಶಿಬಿರದ ಲ್ಲಿ ಅತ್ಯಧಿಕ ಆನೆಗಳಿದ್ದು, ಅಲ್ಲಿಂದ ಹಾರಂಗಿ ಶಿಬಿರಕ್ಕೆ ವರ್ಗಾಯಿಸುವ ಚಿಂತನೆ ಅರಣ್ಯ ಇಲಾಖೆಯದಾಗಿದೆ.

ಹಾರಂಗಿ ಜಲಾಶಯದ ಆವರಣದಲ್ಲಿ ಅತ್ಯಾಧುನಿಕ ಉದ್ಯಾನವನ, ಕಾರಂಜಿ ಜೊತೆಗೆ ಆನೆ ಶಿಬಿರದ ಸೇರೂಪಡೆಯಿಂದ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿದಂತಾಗಿದೆ.

error: Content is protected !!