fbpx

ಜಿಲ್ಲೆಯಲ್ಲಿ ಭತ್ತ ಖರೀದಿ ಪ್ರಕ್ರಿಯೆ ಆರಂಭ :ಮತ್ತೊಂದು ಕಡೆ ಕಾಡಾನೆಗಳಿಂದ ಫಸಲು ನಾಶ

ಜಿಲ್ಲೆಯಲ್ಲಿ 2021-22 ನೇ ಸಾಲಿಗೆ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಭತ್ತ ಖರೀದಿ ಪ್ರಕ್ರಿಯೆ ಪ್ರಾರಂಭವಾಗಿದ್ದು, ಸಾಮಾನ್ಯ ಭತ್ತಕ್ಕೆ ಪ್ರತೀ ಕ್ವಿಂಗೆ 1940 ರೂಪಾಯಿ ಹಾಗೂ ‘ಎ’ ಗ್ರೇಡ್ ಭತ್ತಕ್ಕೆ ಪ್ರತೀ ಕ್ವಿಂಟಾಲ್ಗೆಿ 1960 ರೂ.ಗಳನ್ನು ಸರ್ಕಾರವು ನಿಗಧಿಪಡಿಸಿದೆ.

ಜಿಲ್ಲೆಯಲ್ಲಿ ಒಟ್ಟು ನಾಲ್ಕು ಖರೀದಿ ಕೇಂದ್ರಗಳನ್ನು ತೆರೆಯಲಾಗಿದ್ದು, ಕುಶಾಲನಗರ- ಕೆಎಸ್ಸಿಎಂಎಫ್ ಆವರಣ ಬಾಪೂಜಿ ಬಡಾವಣೆ ಕುಶಾಲನಗರ ತಾಲ್ಲೂಕು, ಶನಿವಾರಸಂತೆ-ಶ್ರೀ ಗಜಾನನ ಮಾಡರ್ನ್ ಅಕ್ಕಿ ಗಿರಣಿ, ಗುಡುಗಳಲೆ ಶನಿವಾರಸಂತೆ, ಮಡಿಕೇರಿ-ಎಪಿಎಂಸಿ ಆವರಣ, ಕೆಎಸ್ ಆರ್ ಟಿ ಸಿ ಡಿಪೋ ಎದುರು ಮಡಿಕೇರಿ ನಗರ ಹಾಗೂ ಗೋಣಿಕೊಪ್ಪ- ಎಪಿಎಂಸಿ ಆವರಣ, ಹರಿಶ್ಚಂದ್ರಪುರ, ಗೋಣಿಕೊಪ್ಪ. ಈ ಸ್ಥಳಗಳಲ್ಲಿ ಖರೀದಿ ಕೇಂದ್ರ ತೆರೆಯಲಾಗಿದೆ.

ರೈತರು ತಮ್ಮ ಪ್ರೂಟ್ಸ್ ಗುರುತಿನ ಸಂಖ್ಯೆಯಲ್ಲಿ ಬೆಳೆ ಸಮೀಕ್ಷೆ ಮಾಹಿತಿ ನಮೂದಾಗಿರುವ ಬಗ್ಗೆ ಸಮೀಪದ ರೈತ ಸಂಪರ್ಕ ಕೇಂದ್ರದಲ್ಲಿ ಖಚಿತಪಡಿಸಿಕೊಳ್ಳಬೇಕು. ನಂತರ ಖರೀದಿ ಕೇಂದ್ರಕ್ಕೆ ಭೇಟಿ ನೀಡಿ ನೋಂದಣಿ ಮಾಡಿಕೊಳ್ಳಲು ಹಾಗೂ ಜಿಲ್ಲೆಯ ರೈತರು ಸರ್ಕಾರದ ಈ ಯೋಜನೆಯನ್ನು ಸದುಪಯೋಗ ಪಡೆದುಕೊಳ್ಳುವಂತೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕರಾದ ಗೌರವ್ ಕುಮಾರ್ ಶೆಟ್ಟಿ ಅವರು ತಿಳಿಸಿದ್ದಾರೆ.

ಇತ್ತ ಅಕಾಲಿಕ ಮಳೆ ಮತ್ತು ಕಾಡಾನೆಗಳ ದಾಳಿಯಿಂದ ಬಹುತೇಕ ಕಡೆಗಳಲ್ಲಿ ಫಸಲು ನಾಶಗೊಂಡಿದೆ.ಕಳೆದ ನಾಲ್ಕೈದು ನಾಲ್ಕೈದು ದಿನಗಳಿಂದ ಮಡಿಕೇರಿಯ ಬೆಟ್ಟತ್ತೂರು ಗ್ರಾಮದ ವ್ಯಾಪ್ತಿಯಲ್ಲಿನ ಭತ್ತದ ಗದ್ದೆಗಳು ಆದಾಗಲೇ ಮಳೆಯಿಂದ ತೋಯ್ದು ಹೋಗಿರುವ ಕಡೆ ಕಾಡಾನೆಗಳು ಅಡ್ಡದಿಡ್ಡಿ ಓಡಾಡಿ ಕೈಗೆ ಬಂದಿದ್ದ ಕನಿಷ್ಠ ಬೆಳೆಯೂ ಮಣ್ಣು ಪಾಲಾಗಿದ್ದು ಪರಿಹಾರಕ್ಕೆ ಒತ್ತಾಯಿಸಿದ್ದಾರೆ.

error: Content is protected !!