fbpx

ಜಿಲ್ಲೆಯಲ್ಲಿ ಭತ್ತದ ನಾಟಿ ಕಾರ್ಯ ಚುರುಕು

ಕೊಡಗಿನಲ್ಲಿ ಮಳೆ ಬಿಡುವು ನೀಡಿದ್ದು, ರೈತರು ಭತ್ತದ ನಾಟಿ ಕಾರ್ಯ ಮಾಡಲು ಸಿದ್ದತೆ ನಡೆದಿದೆ. ಈಗಾಗಲೇ ಕೃಷಿ ಇಲಾಖೆಯ ವತಿಯಿಂದ ವಿವಿಧ ಹೈಬ್ರಿಡ್ ತಳಿಯ ಭತ್ತದ ಸಸಿ ಮಡಿಗಳಿಗೆ ಬಿತ್ತನೆ ಬೀಜ ವಿತರಿಸಿದ್ದು, ಬಿತ್ತನೆ ಕಾರ್ಯಕ್ಕೆ ರೈತರು ಮುಂದಾಗಿದ್ದಾರೆ.

ಹಾರಂಗಿ ಜಲಾಶಯ ಸಂಪೂರ್ಣವಾಗಿ ಭರ್ತಿಯಾದ ಹಿನ್ನಲೆಯಲ್ಲಿ ನಾಲೆಗಳ ಮೂಲಕ ಮೊದಲ ಹಂತದಲ್ಲಿ ನೀರು ಹರಿಸುವ ಮುನ್ನವೇ ರೈತರು ಸಹಕಾರ ಸಂಘಗಳು ಮತ್ತು ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳಿಂದ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ಖರೀದಿಸಿ ಸಸಿ ಮಡಿ ಸಿದ್ದಗೊಳಿಸಿದ್ದು, ಆಗಸ್ಟ್ ಮೊದಲ ವಾರದಲ್ಲಿ ನಾಟಿ ಕಾರ್ಯ ಆರಂಭವಾಗುವ ಲಕ್ಷಣಗಳಿದೆ.

ಮಡಿಕೇರಿ,ವಿರಾಜಪೇಟೆ, ಸೋಮವಾರಪೇಟೆ,ಕುಶಾಲನಗರ ಮತ್ತು ಪೊನ್ನಂಪೇಟೆ ತಾಲ್ಲೂಕಿನ ಭಾಗದಲ್ಲಿ ನಾಟಿ ಕಾರ್ಯ ಚುರುಕುಗೊಂಡಿದೆ.

error: Content is protected !!