ಜಿಲ್ಲೆಯಲ್ಲಿ ಪ್ರವಾಸಿಗರಿಂದ ಕೊರೊನಾ ಹೆಚ್ಚಳ:ಜಿಲ್ಲಾಡಳಿತ ಖಡಕ್ ಸೂಚನೆ

‘ಬಿಗ್ ಬ್ರೇಕಿಂಗ್!’
ಕೊಡಗಿನಲ್ಲಿ 18 ಪರ್ಸೆಂಟಿಗೆ ಏರಿದ ಕೊರೊನಾ ಪೀಡಿತರ ಸಂಖ್ಯೆ ಆತಂಕ ಹೆಚ್ಚಾಗಿದೆ. ಸಾವಿನ ಸಂಖ್ಯೆಯಲ್ಲೂ ಕೊಡಗಿನಲ್ಲಿ ಹೆಚ್ಚಳ ಶೇಕಡ 2 % ಗೆ ಏರಿರುವುದು ಪರಿಸ್ಥಿತಿಯನ್ನು ಇನ್ನೂ ಗಂಭೀರವಾಗಿಸಿದೆ. ಹೊರ ಜಿಲ್ಲೆ, ಹೊರರಾಜ್ಯಗಳಿಂದ ಜನರು ಬರುತ್ತಿರುವುದರಿಂದ ಕೋವಿಡ್ ಹೆಚ್ಚುತ್ತಿರಬಹುದು ಎಂದು ಹೇಳಲಾಗುತ್ತಿದೆ.
ಹೀಗಾಗಿ ದಸರಾ ಮತ್ತು ಕಾವೇರಿ ತೀರ್ಥೋಧ್ಭವ ಸರಳ ಹಾಗು ಸಾಂಪ್ರದಾಯಿಕವಾಗಿ ಆಚರಿಸಲು ಜಿಲ್ಲಾಡಳಿತ ನಿರ್ಧಾರ ಹೊರಡಿಸಿದೆ. ದಸರಾದಲ್ಲಿ ಭಾಗವಹಿಸುವ ಸಿಬ್ಬಂದಿ ಮತ್ತು ಕಾರ್ಯಕರ್ತರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಲಾಗಿದೆ. ಕೋವಿಡ್ ಟೆಸ್ಟ್ ನೆಗೆಟಿವ್ ವರದಿ ಇದ್ದರೆ ಮಾತ್ರ ದಸರಾದಲ್ಲಿ ಭಾಗವಹಿಸಲು ಅವಕಾಶ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ. ಆರ್ಟಿಪಿಸಿಆರ್ ಟೆಸ್ಟ್ ಕಡ್ಡಾಯ ಮಾಡಲಾಗಿದೆ. ದಸರಾ ಕರಗ ವೀಕ್ಷಣೆಗೂ ಸಾರ್ವಜನಿಕರಿಗೆ ಅವಕಾಶ ಇಲ್ಲ ಎಂಬ ಆದೇಶ ಹೊರಡಿಸಲಾಗಿದೆ. ಮೆರವಣಿಗೆ ವೇಳೆ ರಸ್ತೆಯಲ್ಲಿ ನಿಂತು ನೋಡಲು ಅವಕಾಶ ಇಲ್ಲ ಎನ್ನಲಾಗಿದೆ. 17 ಮತ್ತು 26 ರಂದು ರಾತ್ರಿ 10 ಗಂಟೆ ಒಳಗೆ ಮೆರವಣಿಗೆ ಮುಗಿಸಲು ಸೂಚನೆ ನೀಡಲಾಗಿದೆ. 17 ಮತ್ತು 26 ರಂದು ಎರಡು ದಿನ ಪ್ರವಾಸಿ ತಾಣಗಳು ಬಂದ್ ಮಾಡಲಾಗಿದೆ.
ಕೊಡಗಿನ ಪ್ರವಾಸಿ ತಾಣಗಳ ಬಂದ್ ಮಾಡಲು ಆದೇಶ ಹೊರಡಿಸಲಾಗಿದೆ. ದಸರಾ ಸಂದರ್ಭ ಯಾವುದೇ ಬೀದಿ ಬದಿ ಅಂಗಡಿ ತೆರೆಯುವಂತಿಲ್ಲ ಎಂಬ ನಿಯಮ ಮಾಡಲಾಗಿದೆ. ಇದಿಷ್ಟನ್ನು ಮಡಿಕೇರಿಯಲ್ಲಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಹೇಳಿಕೆ ನೀಡಿದ್ದಾರೆ