ಜಿಲ್ಲೆಯಲ್ಲಿ ಜೋರಿದೆ ವರುಣನ ಅಬ್ಬರ!

ಕೊಡಗು ಇನ್ ರೆಡ್ ಅಲಟ್೯!

ಜಿಲ್ಲೆಯಲ್ಲಿ ತೌಪ್ತೆ ಚಂಡಮಾರುತದ ಪರಿಣಾಮ ಜೋರಾದ ಮಳೆ ಬೀಳುತ್ತಿದ್ದು, ಜನತೆಯಲ್ಲಿ ಆತಂಕ ಮೂಡಿಸಿದೆ. ಈಗಾಗಲೇ ಜಿಲ್ಲೆಯಲ್ಲಿ ರೆಡ್ ಅಲಟ್೯ ಘೋಷಣೆಯಾಗಿದ್ದು, 3 ಇಂಚಿಗೂ ಅಧಿಕ ಮಳೆಯಾಗಲಿದೆ ಎಂದು ಕೊಡಗು ಕೃಷಿ ಹವಾಮಾನ ಘಟಕವು  ಮಾಹಿತಿ ನೀಡಿದೆ. ಕೊಡಗಿನಲ್ಲಿ ವಿಪತ್ತುಗಳು ಸಂಭವಿಸಿದಲ್ಲಿ ಎದುರಿಸಲೆಂದು ನಿನ್ನೆ ಮಡಿಕೇರಿ  ನಗರಕ್ಕೆ ಎನ್.ಡಿ.ಆರ್.ಎಫ್ ತಂಡ ಬಂದು ಇಳಿದಿದೆ. ಇಂದು ಮಳೆಯ ಬಿರುಸು ಹೆಚ್ಚಾಗಿದ್ದು, ಗುಡ್ಡ ಬೆಟ್ಟ ಪ್ರದೇಶಗಳಲ್ಲಿ ನೆಲೆಸಿರುವ ಜನರ ಎದೆ ಬಡಿತ ಹೆಚ್ಚಿಸಿದೆ. ಇಂದು ಬಿದ್ದ ಸತತ ಮಳೆಗೆ ಜಿಲ್ಲೆಯಲ್ಲಿ ಏನೇನಾಗಿದೆ ಎಂಬುದರ ಒಂದು ಸಂಕ್ಷಿಪ್ತ ನೋಟ ಇಲ್ಲಿದೆ ನೋಡಿ:

ಬಲಂಬೇರಿ ರಸ್ತೆ ಕುಸಿತ
ಹುದಿಕೇರಿಯಲ್ಲಿನ ನೂತನ ಸೇತುವೆ ಕುಸಿತ
ಸುಂಠಿಕೊಪ್ಪದ ಭೂಕುಸಿತ ಸ್ಥಳಕ್ಕೆ ಪಿಡಿಓ ಭೇಟಿ
ಜಿಲ್ಲೆಯ ವಿವಿಧೆಡೆ ವಿದ್ಯುತ್ ಧರೆಗುರುಳಿದ ವಿದ್ಯುತ್ ಕಂಬ ದುರಸ್ತಿ
ಸೇತುವೆ ಮಟ್ಟಕ್ಕೆ ನೀರು ತುಂಬಿರುವ ಬೇತ್ರಿ ಸೇತುವೆ
ಬಲಮುರಿಯಲ್ಲಿ ಕಾವೇರಿ ನದಿ ಕೆಳಸೇತುವೆ ಮುಳುಗಡೆಯತ್ತ.
ಮೂರ್ನಾಡು ಬಳಿ ಕಾವೇರಿ ನದಿಯಲ್ಲಿ ನೀರಿನ ಏರಿಕೆ
ಮಳೆಗೆ ಭಾಗಮಂಡಲದ ತ್ರಿವೇಣಿ ಸಂಗಮ ಭರ್ತಿ
ಭಗಂಡೇಶ್ವರ ದೇವಾಲಯದ ಎದುರು ಜಲಾವೃತವಾಗಿರುವ ದೃಶ್ಯ
error: Content is protected !!