ಜಿಲ್ಲೆಯಲ್ಲಿ ಕೊರೋನಾ ಸೊಂಕು ದಿಢೀರ್ ಹೆಚ್ಚಳ

ಕೊಡಗಿನಲ್ಲಿ ಕೋವಿಡ್ ಪಾಸಿಟಿವಿಟಿ ರೇಟ್ 5.44%ಕ್ಕೆ ಏರಿಕೆಯಾಗಿದೆ. ಇದು ತೀವ್ರ ಆತಂಕಕ್ಕೆ ಕಾರಣವಾಗಿದೆ.
ಕಳೆದ 24 ಗಂಟೆಗಳಲ್ಲಿ 99 ಪ್ರಕರಣ ದಾಖಲಾಗಿದೆ. ಒಟ್ಟು ಪ್ರಕರಣಗಳಲ್ಲಿ ಮಡಿಕೇರಿ 16, ಸೋಮವಾರಪೇಟೆ 43, ವಿರಾಜಪೇಟೆ 40 ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ. ಒಟ್ಟು 90 ಕಂಟೇನ್ಮೆಂಟ್ ಝೋನ್ ಗುರುತು ಮಾಡಿದ್ದು, ಒಂದು ಸಾವಿನ ಪ್ರಕರಣ ಆಗಿದೆ. ಈ ಕುರಿತು ಜಿಲ್ಲಾಡಳಿತದಿಂದ ಅಧಿಕೃತ ಆದೇಶ ಹೊರ ಬಿದ್ದಿದೆ.