fbpx

ಜಿಲ್ಲೆಯಲ್ಲಿ ಒಂದು ಕೋಟಿ ಮಳೆಹಾನಿ, ಮೃತ ಚಿಣ್ಣಪ್ಪ ಕುಟುಂಬಕ್ಕೆ ಪರಿಹಾರದ ಭರವಸೆ

ಹಾರಂಗಿಯಲ್ಲಿ ಬಾಗಿನ ನೀಡಿ, ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ಹೇಳಿಕೆ ನೀಡಿದ ಅವರು ‘ಕೊಡಗಿನಲ್ಲಿ ಕಳೆದ ಎರಡು ತಿಂಗಳಿನಲ್ಲಿ ನಿರಂತರ ಮಳೆಯಾಗಿದ್ದು,ಜಿಲ್ಲಾಡಳಿತ ಮಾಹಿತಿ ಪ್ರಕಾರ ಒಂದು ಕೋಟಿಯಷ್ಟು ನಷ್ಟ ಸಂಭವಿಸಿರುವ ಬಗ್ಗೆ ಮಾಹಿತಿ ದೊರೆತಿರುವುದಾಗಿ ತಿಳಿಸಿದ್ದಾರೆ.

ನಿರಂತರ ಮಳೆ ಯಿಂದಾಗಿ ಪ್ರವಾಹ ಎದುರಿಸಲು ಜಿಲ್ಲಾಡಳಿತ,ಎನ್ ಡಿ ಆರ್ ಎಫ್,ಸ್ವಯಂ ಸೇವಕರು ಸನ್ನದ್ಧರಾಗಿದ್ಧು, ಜನವಸತಿ, ಜಾನುವಾರುಗಳ ಸ್ಥಳಾಂತರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ.

ರಾಜ್ಯದಲ್ಲೇ ಮೊದಲ ಬಾರಿಗೆ ಜಲಾಶಯ ಭರ್ತಿಯಾಗಿದಕ್ಕೆ ಸಂತಸ ವ್ಯಕ್ತ ಪಡಿಸಿದ ಸಚಿವರು, ರಾಜ್ಯ ಸಂಪತ್ಬರಿತವಾಗಿದೆ ಎಂದರು. ಈ ನಡುವೆ ಮಳೆಯಿಂದ ಪ್ರವಾಹದಲ್ಲಿ ಸಿಲುಕಿ ಮೃತಪಟ್ಟ ಚಿಣ್ಣಪ್ಪರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದರು.

error: Content is protected !!