ಜಿಲ್ಲಾ ಮಹಿಳಾ ಬರಹಗಾರರ ಸಂಘ ಉದ್ಘಾಟನೆ

ಸಾಹಿತಿಗಳು ಬೇರೆ ಬೇರೆ ಸಾಹಿತಿಗಳೊಂದಿಗೆ , ಸಂಘಟನೆಯೊಂದಿಗೆ, ಭೇಟಿ, ಸಂವಾದ ಮಾಡುವ ಮೂಲಕ ತಮ್ಮ ಸಾಹಿತ್ಯ ಪ್ರತಿಭೆಯನ್ನು ಬೆಳೆಸಿಕೊಳ್ಳಬೇಕು. ಕೊಡಗಿನಲ್ಲಿ ಕನ್ಬಡ ಮಾತ್ರವಲ್ಲ ಕೊಡವ, ಅರೆ ಭಾಷೆ, ಬ್ಯಾರಿ, ತುಳು ಎಲ್ಲ ಭಾ಼ಷೆಗಳ ಸಾಹಿತಿಗಳಿದ್ದಾರೆ. ಅವರೆಲ್ಲರನ್ನು ಸೇರಿಸಿ ಸಂಘವನ್ನು ಗಟ್ಟಿಗೊಳಿಸಬೇಕು .ಎಂದು‌ ಸಾಹಿತಿ ಕವಿತಾ ರೈ ನುಡಿದರು ಅವರು ಕೊಡಗು ಪತ್ರಿಕಾ ಭವನದ ಸಭಾಂಗಣದಲ್ಲಿ ನಡೆದ ಕೊಡಗು ಜಿಲ್ಲಾ ಮಹಿಳಾ ಬರಹಗಾರರ ಸಂಘವನ್ನು ಉದ್ಘಾಟಿಸಿ ಮಾತನಾಡುತಿದ್ದರು.ಮಂದುವರೆದ ಅವರು ಕೊರೋನಾ ಸಂದರ್ಭದಲ್ಲಿ ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ಅಧ್ಯಕ್ಷರಾಗಿ ಎಂ.ಪಿ.ಕೇಶವ ಕಾಮತ್ ರವರು ಆನ್ ಲೈನ್ ನಲ್ಲಿ ನಡೆಸಿದ ಇಪ್ಪತೈದು ದಿನಗಳ ಗೀತ ಗಾಯನ ಕಾರ್ಯಕ್ರಮವನ್ನು ನೆನಪಿಸಿ ಕೊಂಡರು. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ಮಾತನಾಡುತ್ತಾ ಓರ್ವ ಮಹಿಳೆ ಲೇಖಕಿ ಅಥವಾ ಸಾಹಿತಿಯಾಗಿದ್ದರೆ ಅವರ ಮನೆ ಮತ್ತು ಸುತು ಮುತ್ತಲ ಪ್ರದೇಶವೂ ಕೂಡ ಸಾಹಿತ್ಯಿಕ ವಲಯ ವಾಗಿರುತ್ತದೆ. ಅದರಲ್ಲೂ ಮಹಿಳಾ ಶಿಕ್ಷಕಿ ಸಾಹಿತಿಯಾಗಿದ್ದರೆ ಆ ಶಾಲೆಯ ವಿದ್ಯಾರ್ಥಿಗಳು ಸಹ ಸಾಹಿತ್ಯಿಕ ಪರಸರದಲ್ಲಿರುತ್ತಾರೆ. ಸಾಹಿತ್ಯ ಪರಿಷತ್ತು ಸಾಹಿತ್ಯ ಸಂಬಂದಿತ ಯಾವುದೇ ಕಾರ್ಯಕ್ರಮ ಗಳಿಗೆ ಸಹಕಾರ ನೀಡುತ್ತದೆ ಎಂದರು. ಸಂಘದ ಬೆಳವಣಿಗೆಗೆ ಎಲ್ಲ ಸದಸ್ಯರು ಕೈ ಜೋಡಿಸಬೇಕು. ಹೆಸರಿಗೆ ಮಾತ್ರ ಪದಾಧಿಕಾರ ಎನ್ನುವ ನೀತಿಬಿಟ್ಟು ಕೆಲಸ ಮಾಡಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ನುಡಿದರು. ಸಂಘದ ಅಧ್ಯಕ್ಷೆ ಶೋಭಾ ಸುಬ್ಬಯ್ಯ ರವರ ಅಧ್ಯಕ್ಷಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಡಿಕೇರಿ ತಾಲೂಕು ಕಸಾಪ ಅಧ್ಯಕ್ಷ ಅಂಬೆಕಲ್ ನವೀನ್, ಮಡಿಕೇರಿ ನಗರಸಭೆಯ ನಿವೃತ್ತ ಆಯುಕ್ತರಾದ ಪುಷ್ಪಾವತಿ, ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷೆ ಉಳ್ಳಿಯಡ ಡಾಟಿ ಪೂವಯ್ಯ ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ರೇವತಿ ರಮೇಶ್ ನಿರೂಪಿಸಿದರು, ಉಪಾದ್ಯಕ್ಷೆ ಡಾ. ಕಾವೇರಿ ಪ್ರಕಾಶ್ ಸ್ವಾಗತಿಸಿ, ಕಟ್ರತನ ಲಲಿತಾ ಅಯ್ಯಣ್ಣ ವಂದಿಸಿದರು.

error: Content is protected !!