ಜಿಲ್ಲಾ ಜೆ.ಡಿ.ಎಸ್ ಪಕ್ಷದಿಂದ ಪ್ರತಿಭಟನೆ, ಮುಂದುವರೆದ ಅಹೋರಾತ್ರಿ ಧರಣಿ

ಕೊಡಗು ಜೆ.ಡಿ.ಎಸ್ ಪಕ್ಷದಿಂದ ಮಡಿಕೇರಿಯಲ್ಲಿ ಅಹೋರಾತ್ರಿ ಪ್ರತಿಭಟನೆ ನಡೆಯಿತು. ಸೂರಿಲ್ಲದವರಿಗೆ ಸೂರು ಕಲ್ಪಿಸಿಕೊಡುವಂತೆ ಒತ್ತಾಯಿಸಿ ದಿಢೀರ್ ಪ್ರತಿಭಟನೆ ಇಂದು ನಡೆಯಿತು.

  ಜೆ.ಡಿ.ಎಸ್ ಪಕ್ಷದಿಂದ ತಲೆಗೊಂದು ಸೂರಿಗೆ ಒತ್ತಾಯಿಸಿ  ಪ್ರತಿಭಟನೆ ನಡೆಯಿತು. ನೆನ್ನೆಯಿಂದ ಮಡಿಕೇರಿ ನಗರಸಭೆ ಮುಂದೆ ಅಹೋರಾತ್ರಿ ಧರಣಿ ಕೂಡ ನಡೆದಿತ್ತು.
ಮೆರವಣಿಗೆಯಲ್ಲಿ ಬಂದ ಪ್ರತಿಭಟನಾಕಾರಿಗೆ ಪೊಲೀಸರಿಂದ ನಗರಸಭೆ ದ್ವಾರದಲ್ಲಿ ತಡೆ ಒಡ್ಡಲಾಯಿತು. ಪೊಲೀಸರ‌ ಕ್ರಮದ ವಿರುದ್ಧ ಜೆ.ಡಿ.ಎಸ್ ನಾಯಕರು ಹಾಗು ಕಾರ್ಯ ಕರ್ತರು ಆಕ್ರೋಶ ವ್ಯಕ್ತಪಡಿಸಿದರು. ನಗರಸಭೆ ಮುಂದೆ ಚುಕ್ಕಾಣಿ‌ ಹೂಡಿ ಪ್ರತಿಭಟನೆ‌ ನಡೆಸಿದ ಪ್ರತಿಭಟನಾಕಾರರು ಸಂವಿಧಾನ ಬದ್ಧ ಪ್ರತಿಭಟನಾ ಹಕ್ಕಿಗೆ ಚ್ಯುತಿ ಆರೋಪವನ್ನು ಹೊರಿಸಿದರು. ಪ್ರತಿಭಟನೆ ನಡೆಸದಂತೆ ನಗರಸಭೆ ಪೌರಾಯುಕ್ತರಿಂದ ನೋಟಿಸ್ ನೀಡಿರುವ ಆರೋಪ ಮಾಡಿರುವ ಜೆ.ಡಿ.ಎಸ್. ಮೂರು ದಿನಗಳ ಆಹೋರಾತ್ರಿ ಧರಣಿಗೆ ಚಾಲನೆ ನೀಡಿದೆ.
   ಸ್ಥಳಕ್ಕೆ ಪೌರಯುಕ್ತ ರಾಮ್‌ದಾಸ್ ಭೇಟಿ ನೀಡಿ, ಒಂದು ತಿಂಗಳೊಳಗೆ ಸೂರಿಗೆ ವ್ಯವಸ್ಥೆ ಮಾಡಿಕೊಡುವ ಭರವಸೆ ನೀಡಿದರು.
ಪ್ರತಿಭಟನೆಯಿಂದ ಹಿಂದಕ್ಕೆ ಸರಿಯುವಂತೆ ಮನವೊಲಿಸಲು  ಪೌರಾಯುಕ್ತರಿಂದ ಯತ್ನಸಿದರು.
  ತಾಹಶೀಲ್ದಾರ್ ಮೂಲಕ ಭರವಸೆ ನೀಡಿದರೆ ಮಾತ್ರ ಪ್ರತಿಭಟನೆಯಿಂದ ಹಿಂದಕ್ಕೆ ಸರಿಯುತ್ತೇವೆ ಎಂದ ಪ್ರತಿಭಟನಾಕಾರರು  ಅಹೋರಾತ್ರಿ ಪ್ರತಿಭಟನೆಯನ್ನು ಮುಂದುವರಿಸಿದ್ದಾರೆ.

ಪಕ್ಷದ ಜಿಲ್ಲಾಧ್ಯಕ್ಷ ಕೆ.ಎಂ ಗಣೇಶ್, ಲೀಲಾ ಶೇಷಮ್ಮ , ಜೆ.ಡಿ.ಎಸ್ ಯುವ ಘಟಕದ ಜಿಲ್ಲಾ ವಕ್ತಾರ ರವಿ‌ ಕಿರಣ್, ಯುವ ಘಟಕದ ನಗರಾಧ್ಯಕ್ಷ ಮೊನೀಶ್, ಸಂಜು ಕಾವೇರಪ್ಪ ತಾಲೂಕು ಅಧ್ಯಕ್ಷ, ನಿಚಿಕೇಶ್ ಕಾರ್ಯದರ್ಶಿ ಹಾಗೂ ಸೂರಿಲ್ಲದ ಹಲವು ಬಡವರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.

error: Content is protected !!