ಜಿಲ್ಲಾಮೈದಾನದ ಅಕ್ಕಪಕ್ಕದಲ್ಲಿನ ಮನೆಗಳಿಗೆ ಹೆಲಿಕಾಪ್ಟರ್ನಿಂದ ಸಮಸ್ಯೆ : ನಿವೃತ್ತ ಯೋಧ ಎಂ.ಪಿ ಮಾದಪ್ಪ ಆರೋಪ

ಮಡಿಕೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಹಿರಿಯ ನಾಗರಿಕ ಕೊಕ್ಕಲೇರ ಕಾಯ೯ಪ್ಪ, ನಿವೖತ್ತ ಸೈನಿಕ ಎಂ.ಪಿ.ಮೇದಪ್ಪ ನಿವೖತ್ತ ಅಧಿಕಾರಿ  ಕೆ.ತಿಮ್ಮಯ್ಯ  ಗಂಭೀರ ಆರೋಪ ಮಾಡಿದ್ದಾರೆ.

ವಾಯು ಮಾಲಿನ್ಯ, ಶಬ್ದ  ಮಾಲಿನ್ಯದಿಂದ ಸ್ಥಳೀಯರಿಗೆ ಕಿರಿಕಿರಿ ಉಂಟಾಗುತ್ತಿದೆ.ಜಿಲ್ಲಾ ಮೈದಾನದಲ್ಲಿ ಹೆಲಿಕಾಪ್ಟರ್ ಹಾರಾಟದಿಂದಾಗಿ ಉಂಟಾಗುತ್ತಿರುವ ಸಮಸ್ಯೆಗೆ ಯಾರು ಹೊಣೆ? ಎಂದು ಅವರು ಪ್ರಶ್ನಿಸಿದರು.ಹಿರಿಯ ನಾಗರಿಕರಿಗೆ, ಅನಾರೋಗ್ಯಪೀಡಿತರಿಗೂ ಸಮಸ್ಯೆಯಾಗುತ್ತಿದೆ.
ಮಕ್ಕಳ ಆನ್ ಲೈನ್ ಕ್ಸಾಸ್ ಗಳಿಗೆ ಕೂಡ ತೀವ್ರವಾದ  ಸಮಸ್ಯೆಯಾಗುತ್ತಿದೆ.

ಜನರಿಗೆ ತೊಂದರೆ, ಜನರಿಗೆ ಅಪಾಯ ಉಂಟಾಗುತ್ತದೆಯೇ ಎಂಬುದನ್ನೂ ಗಮನಿಸದೇ ಜಿಲ್ಲಾಡಳಿತ ಹೆಲಿಕಾಪ್ಟರ್ ಹಾರಾಟಕ್ಕೆ ಹೇಗೆ ಅನುಮತಿ ನೀಡಿತು? ಎಂದು ಕಿಡಿಕಾರಿದರು.
ಅರಣ್ಯ ಪ್ರದೇಶದಲ್ಲಿಯೇ ಹೆಲಿಕಾಪ್ಟರ್ ಹಾರಾಟ ನಿಯಮಬಾಹಿರವಾದಂತಹದ್ದು.ಇಕ್ಕಟ್ಟಾದ ಸ್ಥಳದಿಂದ ಹೆಲಿಕಾಪ್ಟರ್ ಹಾರಾಟ ಅಪಾಯಕಾರಿ. ಕಟ್ಟಡ, ಮನೆಗಳ ಮೇಲೆ ಅಪಾಯಕಾರಿ ಮಟ್ಟದಲ್ಲಿ ಹೆಲಿಕಾಪ್ಟರ್ ಜಾಲಿ ರೈಡ್ ಎಷ್ಟು ಸಮಥ೯ನೀಯ? ಎಂದು ಕೇಳಿದರು.

ಜಿಲ್ಲಾ ಕ್ರೀಡಾಂಗಣ ಇರುವುದು ಜಿಲ್ಲೆಯ ಕ್ರೀಡಾಪಟುಗಳ ಉಪಯೋಗಕ್ಕಾಗಿ. ಆದರೆ ಕ್ರೀಡಾಂಗಣವನ್ನು ಹೆಲಿಪ್ಯಾಡ್ ಮಾಡುವ ಮೂಲಕ ಕ್ರೀಡಾಂಗಣ ಹಾಳು ಮಾಡಿರುವುದಕ್ಕೆ ಜಿಲ್ಲಾಡಳಿತವೇ ಹೊಣೆ ಹೊರಬೇಕು.ಕ್ರೀಡಾಪಟುಗಳ ಹಕ್ಕನ್ನೇ ಜಿಲ್ಲಾಡಳಿತ ಕಸಿದುಕೊಂಡಿದೆ. ಇದೆಂಥಾ ಜಾಲಿ ರೈಡ್?
ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಮಸ್ಯೆಯಾಗದ ಸ್ಥಳದಲ್ಲಿ ಹೆಲಿಕಾಪ್ಟರ್ ಹಾರಾಟ ಮಾಡಲಿ. ಯಾವುದೇ ಸುರಕ್ಷತಾ ಕ್ರಮ ಕೂಡ ಅನುಸರಿಸಿಲ್ಲ.ಹೆಲಿಕಾಪ್ಟರ್ ಪ್ರಯಾಣಿಕರು ಮಾಸ್ಕ್ ಹಾಕುತ್ತಿಲ್ಲ. ಸಾಮಾಜಿಕ ಅಂತರವೂ ಪಾಲನೆಯಾಗುತ್ತಿಲ್ಲ. ಜಿಲ್ಲಾಡಳಿತ ಇದಕ್ಕೆ ಅನುಮತಿ ನೀಡಿದ್ದು ಸರ್ವಾಧಿಕಾರಿ ಧೋರಣೆ ಅಲ್ಲದೆ ಮತ್ತೇನು? ಎಂದು ಕೇಳಿದರು.

ಕಾವೇರಿ ತೀಥೋ೯ದ್ವವಕ್ಕೆ ಸಾಕಷ್ಟು ನಿಬಂಧನೆ ವಿಧಿಸಿದ್ದ ಜಿಲ್ಲಾಡಳಿತ ಯಾವ ರೀತಿ ಹೆಲಿಕಾಪ್ಟರ್ ಹಾರಾಟದಲ್ಲಿ ನಿಯಮ ಪಾಲಿಸುತ್ತಿಲ್ಲ?
ಮಡಿಕೇರಿಯ ಶ್ರೀ ಓಂಕಾರೇಶ್ವರ ದೇವಾಲಯ ಸೇರಿದಂತೆ ಪ್ರಾಚ್ಯ ವಸ್ತು ಇಲಾಖೆಯ ಮಹತ್ವದ ಸ್ಥಳಗಳ ಮೇಲೇ ಹೆಲಿಕಾಪ್ಟರ್ ಹಾರಾಟಕ್ಕೆ ಅನುಮತಿ ನೀಡಿದ್ದದರೂ ಹೇಗೆ? ಇದಕ್ಕೆಲ್ಲಾ ಸಾರ್ವಜನಿಕರ ಅಭಿಪ್ರಾಯ ಮುಖ್ಯವಾಗುವುದಿಲ್ಲವೇ?

ಹೆಲಿಕಾಪ್ಟರ್ ಹಾರಾಟವನ್ನು ಯಾವ ಅಧಿಕಾರಿಗಳು ಪರಿಶೀಲನೆ ಮಾಡಿದ್ದಾರೆ? ಹೇಗೆ ಇಂತ ಅಪಾಯಕಾರಿ ಹಾರಾಟಕ್ಕೆ ಅನುಮತಿ ನೀಡಲಾಗಿದೆ?                ಅನೇಕ ನಿಯಮಗಳು ಇಲ್ಲಿ ಪಾಲನೆಯಾಗಲೇ ಇಲ್ಲ ಏಕೆ? ಎಂದು ಪ್ರಶ್ನೆಗಳ ಸರಮಾಲೆಯನ್ನೇ ಸಿಡಿಸಿದರು.

ಮುಖ್ಯರಸ್ತೆಯ ಪಕ್ಕದಲ್ಲಿಯೇ ಹೆಲಿಕಾಪ್ಟರ್ ಹಾರಾಟಕ್ಕೆ ಅವಕಾಶ ನೀಡಿದ್ದು ಹೇಗೆ? ಮನೆಗಳ ಸಮೀಪಕ್ಕೇ ಹಾದು ಹೋಗುವಂತೆ  ಮೇಲ್ಬಾಗದಲ್ಲಿಯೇ ಹೆಲಿಕಾಪ್ಟರ್ ಹಾರಾಟದಿಂದಾಗಿ ಧೂಳು ಮನೆಯೊಳಗೆ ನುಗ್ಗಿ ಸಮಸ್ಯೆಯಾಗುತ್ತಿದೆ. ಇದು ಜಿಲ್ಲಾಡಳಿತಕ್ಕೆ ಗೊತ್ತಾಗಲಿಲ್ಲವೇ? ಹೇಗೆ ಜಿಲ್ಲಾಡಳಿತ ಇದಕ್ಕೆ ಅನುಮತಿ ನೀಡಿದೆ?

ಮಡಿಕೇರಿಯ ಜನತೆಯ ಮನಸ್ಸನ್ನು ನೋವು ಮಾಡದಿರಿ. ಜಾಲಿ ರೈಡ್ ಹೆಸರಲ್ಲಿ ಮೋಜು ಮಸ್ತಿಯ ಹಾರಾಟಕ್ಕೆ ಅವಕಾಶ ನೀಡಿರುವುದು ತಪ್ಪು.ನಿಗಧಿತ ಸಮಯವನ್ನೂ ಮೀರಿ ದಿನಕ್ಕೆ 20 ಬಾರಿ ಹಾರಾಟ ಮಾಡಲಾಗುತ್ತಿದೆ. ಸಂಜೆ 6 ಗಂಟೆ ಬಳಿಕವೂ ಹಾರಾಟ ಮಾಡಲಾಗುತ್ತಿದೆ. ಇದು ಕಾನೂನು ಬಾಹೀರವಲ್ಲವೇ ಎಂದು ಜಿಲ್ಲಾಡಳಿತಕ್ಕೆ ಕೇಳಿದರು.

error: Content is protected !!