ಜಿಲ್ಲಾಡಳಿತದ ಅನ್ ಲಾಕ್ ಮಾರ್ಗಸೂಚಿಗೆ ರಂಜನ್ ಅಸಮಧಾನ

ಕೊಡಗು ಜಿಲ್ಲೆಯನ್ನು ಅನ್ ಲಾಕ್ ನಿಂದ ಕೈಬಿಟ್ಟು ಜಿಲ್ಲಾಡಳಿತ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಹೊರಡಿಸಿರುವ ಹೊಸ ಮಾರ್ಗ ಸೂಚಿಗೆ ಶಾಸಕ ಅಪ್ಪಚ್ಚು ರಂಜನ್ ವಿರೋಧ ವ್ಯಕ್ತ ಪಡಿಸಿದ್ದಾರೆ.

ಈ ಹಿಂದೆ ವಾರದ ಮೂರು ದಿನಗಳು ಇದ್ದ ಅನ್ ಲಾಕ್ ನಿಯಮದ ಸಮಯವಕಾಶವನ್ನೇ ವಿಸ್ತರಿಸಿದ್ದರೆ ಸೂಕ್ತವಾಗುತ್ತಿತ್ತು,ಅದರ ಬದಲು ವಾರದಲ್ಲಿ ಎಲ್ಲಾ ದಿನಗಳು ಅವಕಾಶ ನೀಡಿ, ನೈಟ್ ಕರ್ಫ್ಯು ಜೊತೆಗೆ ವೀಕೆಂಡ್ ಕರ್ಫ್ಯುನಿಂದ ಕೊರೊನಾ ನಿಯಂತ್ರಣಕ್ಕೆ ಬರುವುದಿಲ್ಲ. ಜಿಲ್ಲೆಯಲ್ಲಿ ಇಂದಿಗೂ 5 ಕ್ಕಿಂತ ಕಡಿಮೆ ಪಾಸಿಟಿವಿಟಿ ರೇಟ್ ಬರುತ್ತಿಲ್ಲ. ಇದು ಮತ್ತೆ ಏರಿಕೆಗೆ ಅವಕಾಶ ನೀಡಿದಂತಾಗಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.

error: Content is protected !!