ಜಿಲ್ಲಾಡಳಿತದಿಂದ ಮಾರ್ಗಸೂಚಿ ಮಾರ್ಪಾಡು

ಕೊಡಗು ಜಿಲ್ಲಾಡಳಿತದಿಂದ ಕೋವಿಡ್ ಮಾರ್ಗಸೂಚಿಯಲ್ಲಿ ಮಾರ್ಪಾಡು ಮಾಡಲಾಗಿದೆ. ಜಿಲ್ಲೆಯಲ್ಲಿ ಕೋವಿಡ್ ಪ್ರಕರಣ ಇಳಿಮುಖ ಹಿನ್ನಲೆಯಲ್ಲಿ ರಾಫ್ಟಿಂಗ್ ಚಟುವಟಿಕೆ ಆರಂಭಿಸಲು ಜಿಲ್ಲಾಡಳಿತ ಗ್ರೀನ್ ಸಿಗ್ನಲ್ ನೀಡಲಾಗಿದೆ.

ಅಮ್ಯೂಸ್ ಮೆಂಟ್ ಪಾರ್ಕ್ ಸ್ವಿಮ್ಮಿಂಗ್ ಪೂಲ್ ಬಳಕೆ ನಿರ್ಬಂಧ ಮಾಡಲಾಗಿದೆ. ನದಿ, ನೈಸರ್ಗಿಕ ತೊರೆ, ಕೆರೆಗಳಲ್ಲಿ ನಡೆಯುವ ಜಲಕ್ರೀಡೆಗಳಿಗೆ ಮಾತ್ರ ಅವಕಾಶ ಮಾಡಿಕೊಡಬೇಕಾಗಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಆದೇಶ ನೀಡಿದ್ದಾರೆ.

error: Content is protected !!