ಜಿಲ್ಲಾಡಳಿತದ್ದು ಒಂದು ನಿಯಮ- ಸರಕಾರದ್ದು ಒಂದು ನಿಯಮ, ಜನರಿಂದ ಹಿಡಿ ಶಾಪ!


ಕೊಡಗು: ರಾಜ್ಯ ಸರ್ಕಾರ ಇಂದಿನಿಂದ ಜಾರಿಗೆ ಗೊಳಿಸಿರುವ ಸೆಮಿ ಲಾಕ್ ಡೌನ್ ,ಇದಕ್ಕೂ ಮೂದಲು ಕೊಡಗು ಜಿಲ್ಲಾಡಳಿತ್ತ ಹೇರಿದ ಟಫ್ ರೂಲ್ಸ್ ನಡುವೆ ಜಿಲ್ಲೆಯ ಜನತೆ ಮಾತ್ರ ಹೈರಾಣಾಗಿದ್ದಾರೆ.ರಾಜ್ಯ ಸರ್ಕಾರದ ರೂಲ್ಸ್ ಪ್ರಕಾರ ಪ್ರತೀ ದಿನ ಬೆಳಗ್ಗೆ 6 ರಿಂದ 10 ಗಂಟೆವರೆಗೆ ಅಗತ್ಯ ವಸ್ತು ಖರೀದಿಸಲು ಅವಕಾಶವಿದೆ,ಆದರೆ ಇದು ಕೊಡಗು ಜಿಲ್ಲೆಗೆ ಅನ್ವಯಿಸುವುದಿಲ್ಲ ಕಾರಣ ವಾರದಲ್ಲಿ ಸಂಪೂರ್ಣ ಲಾಕ್ ಡೌನ್ ಮತ್ತು ಎರಡು ದಿನಗಳು ಮಾತ್ರ 12 ಗಂಟೆವರೆಗೆ ಖರೀದಿಗೆ ಅವಕಾಶ ನಿಗದಿ ಪಡಿಸಲಾಗಿತ್ತು. ಆದರೆ ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವರು ವಾರದ ಸೋಮವಾರ ಮತ್ತು ಶುಕ್ರವಾರ ವ್ಯಾಪಾರ ವಹಿವಾಟಿಗೆ ಅವಕಾಶ ಎಂದರೆ,ಇತ್ತ ಜಿಲ್ಲಾಧಿಕಾರಿ ಮಂಗಳವಾರ ಮತ್ತು ಶುಕ್ರವಾರ ಎಂದು ಹೇಳಿ ಕನ್ಫೂಸ್ ಮಾಡಿ ಕಡೆಗೂ ಸರ್ಕಾರದ ಒತ್ತಡಕ್ಕೆ ಮಣಿದು, ಇಂದು 12 ಗಂಟೆವರೆಗೆ ವ್ಯಾಪಾರ ವಹಿವಾಟು ಆರಂಭವಾಯಿತು. ಆದರೆ ಅದರಲ್ಲೂ ಪಟ್ಟಣದ ಒಳಗೆ ವಾಹನ ತರುವಂತಿಲ್ಲ, ನಿಗದಿತ ಪ್ರದೇಶದವರೆಗೆ ನಡೆದುಕೊಂಡು ಬಂದು,ಅಕ್ಕಿ ಬೇಳೆ ತರಕಾರಿ ಹಣ್ಣು, ದಿನಸಿ ಹೀಗೆ ಹೊತ್ತು ಸಾಗಬೇಕಾದ ಪರಿಸ್ಥಿತಿ ಬಂದಿದೆ. ಈ ದಿನ ಸರ್ಕಾರಕ್ಕೆ ಮತ್ತು ಜಿಲ್ಲಾಡಳಿತಕ್ಕೆ ಹಿಡಿಶಾಪ ಹಾಕಿಕೊಂಡೇ ವಹಿವಾಟುಗಳು ಕೆಲವೆಡೆ ನಡೆದರೆ, ಅಮಾಯಕ ಗ್ರಾಮೀಣ ಪ್ರದೇಶದವರಿಗೆ ಈ ಕಾನೂನಿನ ಅರಿವಿಲ್ಲದೆ, ಮಂಗಳವಾರ ಹೋದರಾಯಿತು ಎಂದು ಅದೆಷ್ಟು ಮಂದಿ ಮನೆಯಲ್ಲೇ ಇದ್ದಾರೋ ಗೋತ್ತಿಲ್ಲ. ಸರಿ ಕೆಲವೆಡೆ ವಹಿವಾಟು, ಕೆಲವೆಡೆ 144 ಸೆಕ್ಷನ್ ವಾತಾವರಣ. ಒಟ್ಟಾರೆಯಾಗಿ ಅರಾಜಕತೆಯ ರಾಜ್ಯಭಾರ.ಇದು ಇಡೀ ದಿನ ಚಿತ್ರಣ.

ಕೊಡಗು ಹೇಗಿತ್ತು ಈ ಫೋಟೋಗಳು ತೆರದಿಡುತ್ತೆ ನೋಡಿ…

ಸುಂಟಿಕೊಪ್ಪ ಪಟ್ಟಣದ ಚಿತ್ರ
ಬೇತ್ರಿ ಸೇತುವೆ ಎದುರು ಬ್ಯಾರಿಕೇಡ್ ಹಾಕಿರುವ ಪೊಲೀಸರು
ಅಗತ್ಯ ವಸ್ತುಗಳನ್ನು ಹೊತ್ತುಕೊಂಡು ಹೋಗಲು ಹೆಣಗಾಡುತ್ತಿರುವ ವೃದ್ಧ
ಮಡಿಕೇರಿ ಬಸ್ ನಿಲ್ದಾಣದಲ್ಲಿ ಜನರೇ ಇಲ್ಲದೆ ಬಣಗುಡುತ್ತಿರುವ ತರಕಾರಿ ವ್ಯಾಪಾರಿಗಳು
ಅಗತ್ಯ ವಸ್ತುಗಳನ್ನು ಕೊಳ್ಳಲು ತರಾತುರಿಯಲ್ಲಿರುವ ಐಟಿಐ ಜಂಕ್ಷನ್ ಚಿತ್ರ
ಸೋಮವಾರಪೇಟೆಯಲ್ಲಿ ಬಿಕೋ ಎನ್ನುವ ಪರಿಸ್ಥಿತಿಯಲ್ಲಿ ನಷ್ಟ ಅನುಭವಿಸುತ್ತಿರುವ ವ್ಯಾಪಾರಿಗಳು
ಕುಶಾಲನಗರದ ರಥಬೀದಿ ಬಂದ್ ಚಿತ್ರ
ನಿರ್ಜನವಾದ ನೀರವತೆಯಲ್ಲಿ ಪೊನ್ನಂಪೇಟೆ ಬಸ್ ಸ್ಟಾಂಡ್ ಬಳಿಯ ಚಿತ್ರ
ಕಾಲ್ನಡಿಗೆಯಲ್ಲಿ ಅಗತ್ಯ ದಿನಸಿ ವಸ್ತುಗಳ ಹೊತ್ತುಕೊಂಡು ಸಾಗುತ್ತಿರುವ ಮಹಿಳೆಯರು

ಹೀಗೇ ಪರಿಸ್ಥಿತಿ ಮುಂದುವರೆದರೆ ಜಿಲ್ಲೆಯ ಜನರ ತಾಳ್ಮೆಯ ಮಿತಿ ಮೀರಿ ವ್ಯವಸ್ಥೆಯ ವಿರುದ್ಧ ಧಂಗೆ ಏಳುವ ಸ್ಥಿತಿ ಬಂದೊದಗಬಲ್ಲದು. ಜನರಿಗೆ ಈ ಸಂದಿಗ್ಧತೆಯಲ್ಲಿ ನೆರವಾಗಬೇಕಿದ್ದ ಇಲ್ಲಿನ ಆಡಳಿತ ವ್ಯವಸ್ಥೆ ಜನರನ್ನೇ ಮನಸೋ ಇಚ್ಛೆ ಆದೇಶಗಳನ್ನು ನೀಡಿ ಆಡಿಸುತ್ತಿರುವುದು ಖಂಡನೀಯ ಮತ್ತು ಅಸಹನೀಯ…!

error: Content is protected !!