ಜಿಂಕೆ ಕೊಂಬು ಮಾರಾಟ ಯತ್ನ: ಬಂಧನ

ಕೊಡಗು: ಚುಕ್ಕಿ ಜಿಂಕೆಗಳ ಕೊಂಬುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ವೇಳೆ ಪೋಲಿಸ್ ಅರಣ್ಯ ಸಂಚಾರಿ ದಳ ಮಿಂಚಿನ ಕಾರ್ಯಾಚರಣೆ ನಡೆಸಿ ಎರಡು ಕೊಂಬುಗಳನ್ನು ವಶಕ್ಕೆ ಪಡೆದು ಓರ್ವ ಆರೋಪಿ ಮತ್ತು ಬೈಕ್ ಅನ್ನು ವಶಕ್ಕೆ ಪಡೆದ ಘಟನೆ ಸೋಮವಾರಪೇಟೆಯಲ್ಲಿ ನಡೆದಿದೆ.ಇಲ್ಲಿಗೆ ಸಮೀಪದ ಕಿಬೆಟ್ಟ ಗ್ರಾಮದ ಬಸ್ ನಿಲ್ದಾಣದಲ್ಲಿ ಹೊಳೆನರಸಿಪುರದ ಪ್ರಮೋದ್ ಮತ್ತು ಶನಿವಾರಸಂತೆಯ ನಿಡ್ತಕೊಪ್ಪಲುವಿನ ಎಂಬಿಬ್ಬರು ಬೈಕಿನಲ್ಲಿ ಒಂದು ಪ್ಲಾಸ್ಟಿಕ್ ಕವರಿನಲ್ಲಿ ಮಾರಾಟ ಮಾಡಲು ಬಂದಿದ್ದು,ಕಾರ್ಯಾಚರಣೆಯಲ್ಲಿ ತೊಡಗಿದ್ದ ಪೋಲಿಸರು ಪ್ರಮೋದ್ ನನ್ನು ವಶಕ್ಕೆ ಪಡೆದಿದ್ದು ಯತೀಶ್ ಎಂಬಾತ ಪರಾರಿಯಾಗಿದ್ದು,ಆತನ ಶೋಧಕಾರ್ಯ ನಡೆಸಲಾಗುತ್ತಿದೆ.ಸದ್ಯಕ್ಕೆ ವನ್ಯಜೀವಿ ಸಂರಕ್ಷಣಾ ಕಾಯಿದೆ ಅಡಿಯಲ್ಲಿ ಪ್ರಮೋದ್ ನನ್ನು ನ್ಯಾಯಾಲಯಕ್ಕೆ ಹಾಜರುಪಡಿಹಿ ಪೋಲಿಸರಿಗೆ ಹಸ್ತಾಂತರ ಮಾಡಲಾಗಿದೆ.