ಜಿಂಕೆಗಳ ಬೇಟೆ, ಇಬ್ಬರ ಬಂಧನ

ಕೊಡಗು: ಜೇನುಕಲ್ಲು ಮೀಸಲು ಅರಣ್ಯದಲ್ಲಿ ಜಿಂಕೆಗಕ್ಷನ್ನು ಬೇಟೆ ಮಾಡಿ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.ಇಲ್ಲಿಗೆ ಸಮೀಪದ ಹೊಸಳ್ಳಿ ಗ್ರಾಮದ ತಮ್ಮು ಅಲಿಯಾಸ್ ಕಾವೇರಪ್ಪ ಮನೆ ಮೇಲೆ ದಾಳಿ ನಡೆಸಿದ ಅರಣ್ಯ ಇಲಾಖೆ ಎರಡು ಕೆಜಿ ಜಿಂಕೆ ಮಾಂಸ ಮತ್ತುಮೂರು ಕೆಜಿ ಜಿಂಕೆ ಪ್ರಭೇಧದ ಕಾಡುಕುರಿಯ ಮಾಂಸ,ಒಂಟಿ ನಳಿಗೆ ಕೋವಿ,ಮೂರು ಜೀವಂತ ಗುಂಡುಗಳು,ಜಿಂಕೆ ಚರ್ಮಗಳನ್ನು ವಶಕ್ಕೆ ಪಡೆಯಲಾಗಿದೆ.