ಜಾತ್ಯಾತೀತತೆಗೆ ಇನ್ನೊಂದು ಹೆಸರೇ ‘ಭಾರತ’

ರಾಮ ಮಂದಿರ ಭೂಮಿ ಪೂಜೆ ವಿಶೇಷ
ಭಾರತದ ಸಂವಿಧಾನದಲ್ಲಿ ಜಾತ್ಯಾತೀತತೆಯ ಪದ ಇದೆಯಾದರೂ ಅದನ್ನು ಪಾಲಿಸುತ್ತಿರುವ ನಮ್ಮ ದೇಶವಾಸಿಗಳದ್ದು, ನಿಜಕ್ಕೂ ಉದಾರತೆ, ವಿಶಾಲತೆಯ ದೃಷ್ಟಿಕೋನ. ರಾಮ ಮಂದಿರ ನಿರ್ಮಾಣದ ಸುದ್ದಿಯ ಕಾವು ಏರುತ್ತಿರುವ ಈ ಸಂದರ್ಭ ಜಾತ್ಯಾತೀತ ಮನೋಭಾವ ಬಗ್ಗೆ ಯೋಚಿಸುವಾಗ ಇದೆಲ್ಲಾ ನಂ್ ಕಣ್ಣೆದುರಿಗೆ ಉತ್ತಮ ನಿದರ್ಶನಗಳಾಗಿ ಬಂದು ನಿಲ್ಲುತ್ತವೆ.
ಮುಸ್ಲಿಮ್ ವ್ಯಕ್ತಿಯು ರಾಮ ಮಂದಿರದ ಭೂ ಪೂಜೆಗೆ 800 ಕಿಲೋ ಕಾಲ್ನಡಿಗೆಯಲ್ಲಿ ಬಂದರು

ಛಂಡೀಘರ್ ರಾಜ್ಯದ ಛಾಂದ್ ಖುರಿ ಎಂಬಲ್ಲಿಗೆ ಸೇರಿದ ಮಹಮ್ಮದ್ ಫೈಜ಼್ ಖಾನ್ 800 ಕಿಲೋ ಮೀಟರ್ ಪಾದಯಾತ್ರೆಯಲ್ಲಿ ಕ್ರಮಿಸಿ, 5ನೇ ತಾರಿಕು ರಾಮ ಮಂದಿರದ ಭೂಮಿ ಪೂಜೆಗೆ ತಲುಪುವ ಸಂಕಲ್ಪ ತೊಟ್ಟಿದ್ದಾರೆ. ಅವರೇ ಹೇಳುವ ಪಲಕ್ಷಾಂತ’ಈವರೆಗೆ ನಾನು ದೇಶಾದ್ಯಂತ ಹಲವಾರು ದೇವಸ್ಥಾನ, ಮಠಗಳಿಗೆಂದು ಸುಮಾರು 15,000 ಕಿಲೋ ಮೀಟರ್ ಕಾಲು ನಡಿಗೆಯಲ್ಲಿ ಸಾಗಿ ಅಲ್ಲೆಲ್ಲಾ ತಂಗಿದ್ದೇನೆ. ಅಲ್ಲಿ ಎಲ್ಲಾ ನಾನು ಇಸ್ಲಾಂ ಧರ್ಮದ ವ್ಯಕ್ತಿ ಎಂದು ತಿಳಿದೂ ಕೂಡ ಅಲ್ಲಿನ ಜನರೂ ಏನು ಹೇಳಲಿಲ್ಲ.’ ಎನ್ನುತ್ತಾರೆ.
ಪುರಾತನ ನಾಣ್ಯವನ್ನು ರಾಮಮಂದಿರಕ್ಕೆ ಕೊಡಗೆಯಾಗಿ ನೀಡಲಿರುವ ಮುಸಲ್ಮಾನ

ಮೂಲತಃ ಉತ್ತರಪ್ರದೇಶದ ಅಜ಼ಮ್ ಘರ್ ಜಿಲ್ಲೆಯವರಾದ ಸೈಯ್ಯದ್ ಮಹಮ್ಮದ್ ಇಸ್ಲಾಂ ಅವರು ತಮ್ಮ ಪೂರ್ವಜರ ಮನೆಯ ದುರಸ್ತಿ ಮಾಡಿಸುತ್ತಿರುವಾಗ, ನೆಲದ ಅಡಿಯಲ್ಲಿ 9 ಮಿಶ್ರಲೋಹದಿಂದ ಮಾಡಿದ್ದ ಎರಡು ಬೆಲೆ ಬಾಳುವ ನಾಣ್ಯಗಳು ಸಿಕ್ಕಿದ್ದವು. ಅದರಲ್ಲಿ ಶ್ರೀರಾಮಚಂದ್ರ, ಸೀತೆ, ಹನುಮಂತನ ಚಿತ್ರಗಳಿದ್ದು ನಾಣ್ಯವಯ ಲಕ್ಷಾಂತರ ರೂಪಾಯಿ ಬೆಲೆ ಬಾಳುತ್ತದೆ.
ಅದನ್ನು ರಾಮ ಮಂದಿರದ ನಿರ್ಮಾಣಕ್ಕೆಂದು ಕೊಡುಗೆಯಾಗಿ ರಾಮ ತೀರ್ಥ ಕ್ಷೇತ್ರದ ಚೇರ್ ಮೆನ್ ಗೆ ಅಯೋಧ್ಯೆಗೆ ಹೋಗಿ ರಾಮಮಂದಿರಕ್ಕೆ ಕೊಡುಗೆಯಾಗಿ ನೀಡುವುದಾಗಿ ತಿಳಿಸಿದ್ದಾರೆ.
ಹಣ ದೇಣಿಗೆ ನೀಡಿದ ಅಸ್ಸಾಮಿಸ್ ಮುಸ್ಲಿಂ ಸಮುದಾಯ
ಅಸ್ಸಾಮಿಗೆ ಸೇರಿದ 21 ಮುಸ್ಲಿಂ ಸಂಘಟನೆಗಳು ಒಟ್ಟುಗೂಡಿ 5 ಲಕ್ಷ ರೂಪಾಯಿಯ ದೇಣಿಗೆ ನೀಡಿತ್ತು. ಅದರ ಮೂಲಕ ಏಕತೆ, ಸಾಮರಸ್ಯ, ಸಹೋದರತ್ವದ ಸಂದೇಶ ನೀಡಲು ಪ್ರಯತ್ನಿಸಿದೆ.
ಸೆಂಟ್ರಲ್ ವಕ್ಫ್೯ ಬೋಡ್೯ ಚೇರ್ ಮೆನ್ ದೇಣಿಗೆ

ಉತ್ತರ ಪ್ರದೇಶದ ಶಿಯಾ ಸೆಂಟ್ರಲ್ ವಕ್ಫ್೯ ಬೋಡ್೯ ಚೇರ್ ಮೆನ್ ವಸ್ಸಿಂ ರಿಜ಼್ಮಿ ಅವರು ರಾಮಮಂದಿರದ ನಿರ್ಮಾಣಕ್ಕೆಂದು ವೈಯಕ್ತಿಕವಾಗಿ ದೇಣಿಗೆ ಹಣ ನೀಡಿದ್ದಾರೆ.

ಇಷ್ಟಲ್ಲದೆ, ಅಯೋಧ್ಯೆಯಲ್ಲಿ ಈಗ ಮುಸ್ಲಿಮರು ರಾಮ ಮಂದಿರ ಭೂಮಿ ಪೂಜೆಯ ಬ್ಯಾನರ್ ಬಂಟಿಗ್ ಗಳನ್ನು ಹಾಕಿ, ಪ್ರಚಾರ ನೀಡುತ್ತಿದ್ದಾರೆ. ಅಲ್ಲದೆ, ನಿರ್ಮಾಣಕ್ಕೂ ಕೈ ಜೋಡಿಸಿದ್ದಾರೆ.

ದಶಕಗಳ ಕಾಲ ಹೈಕೋಟ್೯, ಸುಪ್ರಿಂ ಕೋಟ್೯ನಲ್ಲಿ ರಾಮಮಂದಿರ, ಬಾಬರಿ ಮಸೀದಿಯ ದಾವೆ ನಡೆದು ಹಿಂದೂ ಮುಸ್ಲಿಮರ ನಡುವೆ ಕೋಮು ಗಲಭೆಗಳು ಸಂಭವಿಸಿದ್ದರೂ ಕೂಡ ಇಂದು ಮತ್ತೆ ಅಣ್ಣ ತಮ್ಮಂದಿರಂತೆ ಒಗ್ಗಟ್ಟು ಪ್ರದರ್ಶಿಸಿರುವುದು ನಮ್ಮ ದೇಶದಲ್ಲಿ ಜಾತ್ಯಾತೀತತೆ ಇನ್ನೂ ಜೀವಂತವಾಗಿದೆ ಎಂಬುದಕ್ಕೆ ಜ್ವಲಂತ ಸಾಕ್ಷಿಯಾಗಿದೆ. ಇದೇ ನಮ್ಮ ದೇಶದ ವಿಶಿಷ್ಟ ಸೊಬಗೂ ಕೂಡ ಆಗಿದೆ.