fbpx

|ಜಾತಿ ಆಧಾರದಲ್ಲಿ ಕೊಡಗಿನಲ್ಲಿ ಭ್ರಷ್ಡಾಚಾರಕ್ಕೆ ಅವಕಾಶವಿಲ್ಲ|ಕೊಡವ ಮಕ್ಕಡ ಕೂಟ ಎಚ್ಚರಿಕೆ|

ಸ್ವಜಾತಿ ಪ್ರೇಮದಿಂದ ಕೊಡಗಿನಲ್ಲಿ ಭ್ರಷ್ಟಾಚಾರಿಗಳಿಗೆ ಬೆಂಬಲ ನೀಡುವುದನ್ನು ಕೊಡವ ಮಕ್ಕಡ ಕೂಟ ಸಹಿಸುವುದಿಲ್ಲವೆಂದು ಕೂಟದ ಅಧ್ಯಕ್ಷರಾದ ಬೊಳ್ಳಜಿರ ಅಯ್ಯಪ್ಪ ಎಚ್ಚರಿಕೆ ನೀಡಿದ್ದಾರೆ.

ಕೊಡಗಿನಲ್ಲಿ ಕೆಲವು ಭ್ರಷ್ಟ ಅಧಿಕಾರಿಗಳು ತಮ್ಮ ಮೇಲಿನ ಆರೋಪಗಳನ್ನು ಪ್ರಶ್ನೆ ಮಾಡದೆ ಇರಲು ಸ್ವಜಾತೀಯ ಸಂಘಟನೆಗಳನ್ನು ಬಳಸಿಕೊಳ್ಳುತ್ತಿರುವುದು ಕಂಡು ಬರುತ್ತಿದ್ದು ಇದನ್ನು ಕೊಡಗಿನ ಜನ ಸಹಿಸುವುದಿಲ್ಲ.ಕೊಡಗು ಜಿಲ್ಲೆಯಲ್ಲಿ ಪ್ರಾಮಾಣಿಕ ಅಧಿಕಾರಿಗಳು ಮಾತ್ರ ಕೆಲಸ ಮಾಡಲಿ. ಭ್ರಷ್ಟಾಚಾರ ಮಾಡಿ ಕಳಪೆ ಕಾಮಗಾರಿ ನಿರ್ವಹಿಸಿ ಸಾರ್ವಜನಿಕರ ತೆರಿಗೆ ಹಣವನ್ನು ಲೂಟಿ ಮಾಡುವ ಅಧಿಕಾರಿಗಳು ಮತ್ತು ಅವರನ್ನು ಪ್ರೋತ್ಸಾಹಿಸುವ ಇತರರ ವಿರುದ್ದ ಹಮ್ಮಿಕೊಳ್ಳುವ ಎಲ್ಲಾ ಹೋರಾಟಗಳಿಗೂ ಕೊಡವ ಮಕ್ಕಡ ಕೂಟ ಬೇಷರತ್ ಬೆಂಬಲ ನೀಡಲಿದೆ ಎಂದು ಬೊಳ್ಳಜಿರ ಅಯ್ಯಪ್ಪ ಸ್ಪಷ್ಟಪಡಿಸಿದ್ದಾರೆ.

error: Content is protected !!