ಜಾಂಬವಂತನಿಗೆ ರಕ್ಷಣೆ ಅಗತ್ಯ…

ವನ್ಯ-ಅನನ್ಯ
ಅದು ತೂಂಬತ್ತರ ದಶಕದ ಆಸುಪಾಸು,ಜಾತ್ರೆಗಳು ಉತ್ಸವಗಳಿರಲ್ಲಿ ಅಲ್ಲಿ ಒಂದು ಕಪ್ಪು ಕೂದಲಿನ ಜೀವಿಯೊಂದರ ಕುತ್ತಿಗೆಗೆ ಸರಪಳಿ ಹಾಕಿ ಮಾಲೀಕನ ತಾಳಕ್ಕೆ ಕುಣಿಯುತ್ತಿದ್ದ ದೃಶ್ಯ ಸಾಮಾನ್ಯವಾಗಿರುತ್ತಿತ್ತು,ಕಾಲಕ್ರಮೇಣ ಈ ಜೀವಿ ಅಳಿವಿನಂಚಿಗೆ ಹೋಯಿತು. ಹೌದು ,ನಾನು ಹೇಳುವುದಕ್ಕೆ ಜೇನು ತುಪ್ಪ ಕಳ್ಳ,ಸೋಂಬೇರಿ ಹಾಗೆ ದಾಳಿ ಮಾಡಿದರೆ ಉಳಿಯುವುದೇ ಕಷ್ಟ ಎನ್ನುವ ಖ್ಯಾತಿ ಕುಖ್ಯಾತಿ ಪಡೆದಿರುವ ಜೀವಿ ಬಗ್ಗೆ….
ರಾಮಾಯಾಣದ ಪ್ರಕಾರ ಸೀತಾಪಹರಣ ಸಂದರ್ಭ ರಾಜ್ಯದ ಬಳ್ಳಾರಿಯಲ್ಲಿ ಆಂಜನೇಯ ಜನಿಸಿದ,ಜಾಂಬವಂತ ಆಂಜನೇಯನ ಸ್ನೇಹಿತ .ಶ್ರೀರಾಮ ರಾವಣನ ಸಂಹಾರಕ್ಕೆ ತನ್ನ ಸೇನೆ ಸಿದ್ದ ಪಡಿಸುತ್ತಿದ್ದ ವೇಳೆ ಆಂಜನೇಯ ಶ್ರೀರಾಮ ತನ್ನ ಸ್ನೇಹಿತನ ಜಾಂಬವಂತನ ಸೇನೆ
ಕರೆದು ಕೊಂಡು ಬರುತ್ತೇನೆ ಎಂದು ಹೊರಟು ಸೇನೆಯನ್ನು ಕರಿಕಲ್ಲುಗುಡ್ಡದಲ್ಲಿ ಸಿದ್ದ ಮಾಡುತ್ತಾರೆ. ಇಂದಿಗೂ ಅದರ ಐತಿಹ್ಯ ಇದೆ… ಅರೇ ಇದೇನಿದು ಪೌರಾಣಿಕ ಕಥೆ ಬಗ್ಗೆ ಹೇಳುತ್ತಿರುವುದಲ್ಲ,ಇಂದಿಗೂ ಈ ಸ್ಥಳಕ್ಕೆ ಹೋದರೆ ಈ ಕಥೆ ಕೇಳಿ ಬರುತ್ತದೆ. ಅಂದ ಹಾಗೆ ಈ ಸ್ಥಳ ಯಾವುದು ಗೊತ್ತಾ.. ನಮ್ಮ ರಾಜ್ಯದ ಬಳ್ಳಾರಿಯಿಂದ 20 ಕಿಲೋಮೀಟರ್ ಕ್ರಮಿಸಿದರೆ ಸಿಗುತ್ತದೆ ದರೋಜಿ ವನ್ಯಧಾಮ,
ಅರ್ಥಾತ್ ಕರಡಿ ವನ್ಯಧಾಮ ಏಶಿಯಾದಲ್ಲೇ ಮೊಟ್ಟಮೊದಲ ಕರಡಿ ವನ್ಯಧಾಮ. ಜೇನು ಕುಡಿಯುವ ಸೋಂಬೇರಿ ಕರಡಿಗಳನ್ನು ಹಿಡಿದು ಕೆಲವು ವ್ಯಕ್ತಿಗಳು ತರಬೇತಿ ನೀಡಿ ಸರ್ಕಸ್ ಮತ್ತು ಸಾರ್ವಜನಿಕರಿಗೆ ಪ್ರದರ್ಶನ ನೀಡಲು ಬಳಸುತ್ತಿದ್ದರು.

1994ರಲ್ಲಿ, ಇವುಗಳ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಬಳ್ಳಾರಿಯಿಯ ಕಮಲಾಪುರ ವನ್ಯಧಾಮದಲ್ಲಿರುವ ಕಲ್ಲು ಗುಡ್ಡ ರಕ್ಷಣೆ ಮಾಡಿ ಅಕ್ಕಪಕ್ಕದ ಬಿಳಿಕಲ್ಲು,ಬೂಕನ ಸಾಗರ ಸಘರಿದಂತೆ 8272.8 ಹೆಕ್ಟೇರ್ ದರೋಜಿ ಸ್ಲಾಟ್ ಬೇರ್ ಉದ್ಯಾನವನ ನಿರ್ಮಾಣ ಮಾಡಿದೆ.
ಏಷಿಯಾ ಖಂಡದ ಉತ್ತರ ಭಾಗದಲ್ಲಿ ಹೊರತು ಪಡಿಸಿದರೆ ಜೀವ ಸಂಕುಲಗಳ ಉಳಿಸಲು ಪಣ ತೊಟ್ಟಿದ್ದೆ ಎನ್ನುವುದಕ್ಕೆ ಭಾರತಂತಹಾ ದೇಶ ಅಗ್ರಗಣ್ಯದಲ್ಲಿದೆ ಇದಕ್ಕೆ ಸಾಕ್ಷಿ ಎನ್ನುವುದಕ್ಕೆ ಹುಲಿ ಗಣತಿಯ ವಿಶ್ವ ದಾಖಲೆ ಸಾಕ್ಷಿ.

ಇನ್ನು ಕರಡಿಗಳು ಎಂತಹಾ ಸಂದರ್ಭದಲ್ಲೂ ದಾಳಿ ಮಾಡುವ ಪ್ರವೃತಿ ಹೊಂದಿರುವಂತಹವು,ಅವುಗಳ ಹಲ್ಲು,ಉಗುರುಗಳು ಅಷ್ಟೇ ನಾಜೂಕಾಗಿರುತ್ತದೆ. ಇವರುಗಳ ಹೆಸರು ವಿಚಿತ್ರ,ಇವುಗಳ ಚಿತ್ರಗಳು ನೋಡಿದರೆ ಯಾಕೆ ಹೀಗೆ ಹೆಸರಿಡಲಾಗಿದೆ ಅಂತಾ ನೋಡಿ.

ಮೂನ್ ಬೇರ್,ಸನ್ ಬೇರ್,ಬ್ರೌನ್ ಬೇರ್ ,ಸ್ಲಾಥ್ ಬೇರ್. ಇವು ಪ್ರಮುಖವಾದವು. ಇದರಲ್ಲಿ ಸ್ಲಾಥ್ ಬೇರ್ (ಜೇನು ಪ್ರಿಯ) ಕಂಡು ಬರುವುದು ಕರ್ನಾಟಕದಲ್ಲಿ ಮಾತ್ರ. ಉಳಿದವು ಹೆಚ್ಚಾಗಿ ಹಿಮಾಲಯದ ಪ್ರದೇಶದಲ್ಲಿ ಕಂಡು ಬರುತ್ತದೆ.
ಆಹಾರ ಅರೆಸಿ ಬರುವ ಕರಡಿಗಳು ಆಹಾರಕ್ಕೆ ದಾಳಿ ಮಾಡುವುದು ಸಹಜ. ನಮ್ಮೆಚ್ಚರಿಕೆಯಲ್ಲಿ ನಾವಿರಬೇಕಷ್ಟೆ…
