ಜನ ಸಾಲಲ್ಲಿ ಗಂಟೆಗಟ್ಟಲೆ ನಿಂತು ವ್ಯಾಕ್ಸಿನೇಷನ್ ಇಲ್ಲದೆ ಮನೆಗೆ ಮರುಳಿದರು!

ಕುಶಾಲನಗರ: ಇಂದು 18 ವಯಸ್ಸಿನ ಮೇಲಿನ ವ್ಯಕ್ತಿಗಳಿಗೆ ವ್ಯಾಕ್ಸಿನೇಷನ್‌ ರೈತ ಭವನದಲ್ಲಿ ಪಡೆಯಬಹುದು ಎಂದು ಪಟ್ಟಣ ಪಂಚಾಯತಿ ಸದಸ್ಯರಾದ ಅಮೃತ್ ರಾಜ್ ತಿಳಿಸಿದರು.

ಅದೇ ರೀತಿಯಲ್ಲಿ ಬಹಳಷ್ಟು ಯುವಕ ಯುವತಿಯರು ವ್ಯಾಕ್ಸಿನೇಷನ್‌ ಪಡೆಯಲು‌ ಬೆಳಗ್ಗೆ 6 ರಿಂದ ಸರತಿ ಸಾಲಿನಲ್ಲಿ ನಿಂತಿದ್ದರು. ನಂತರ 9 ಗಂಟೆಗೆ ಬಂದ ಆರೋಗ್ಯ ಅಧಿಕಾರಿಗಳು ಇವತ್ತು ಯಾವುದೇ ಕಾರಣಕ್ಕೂ 18 ಮೇಲಿನವರಿಗೆ ಲಸಿಕೆ ಕೋಡುವುದಿಲ್ಲ ಎಂದು ತಿಳಿಸಿದರು. ಬೆಳಿಗ್ಗೆ ನಿಂದ ಉತ್ಸಾಹದಿಂದ ಸರತಿ ಸಾಲಿನಲ್ಲಿ ನಿಂತ ಯುವಶಕ್ತಿ ಆಕ್ರೋಶ ವ್ಯಕ್ತಪಡಿಸಿ ನೋವಿನಿಂದ ತೆರಳಿದರು ಇಲ್ಲಿ ತಪ್ಪು ಯಾರದು…?!

error: Content is protected !!