ಜನ ವಸತಿ ಪ್ರದೇಶಕ್ಕೆ ನುಗ್ಗಿದ ಒಂಟಿ ಸಲಗ!

ಕುಶಾಲನಗರ ತಾಲ್ಲೂಕಿನ ನೆಲ್ಯುದಿಕೇರಿಯಲ್ಲಿ ಹಾಡಹಗಲೇ ಜನ ವಸತಿ ಪ್ರದೇಶಕ್ಕೆ ಒಂಟಿ ಸಲಗ ನುಗ್ಗಿ ಆತಂಕ ಮೂಡಿಸಿದೆ.

ಇಲ್ಲಿನ ಎಂ.ಜಿ ಕಾಲೋನಿಯ ಬೀದಿಗಳಲ್ಲಿ ಪೆರೆಡ್ ನಡೆಸಿದ್ದ ಸಲಗವನ್ನು ಸ್ಥಳೀಯರು ಅದೆಷ್ಟೇ ಪ್ರಯತ್ನ ಪಟ್ಟರೂ, ಮನೆಯ ಗೇಟ್ ಮೂಲಕ ಮನೆಯ ಅಂಗಳಕ್ಕೆ ನುಗ್ಗಿದಲ್ಲದೆ ಮನೆಯವರಲ್ಲಿ ಆತಂಕ ಮೂಡಿಸಿತು.

ಘೀಳುತ್ತಲೇ ಅತ್ತಿಂದಿತ್ತ ಓಡಾಡುತ್ತಿದ್ದ ಕಾರಣ ಕಾಲೋನಿಯ ಜನರು ಮನೆಯಲ್ಲೇ ಭದ್ರವಾಗಿದ್ದ ಕಾರಣ ಯಾವುದೇ ಅನಾಹುತ ಸಂಭವಿಸಲಿಲ್ಲ. ಆನೆಯ ಕಾಲಿಗೆ ಪೆಟ್ಟಾಗಿದ್ದು ದಾರಿ ತಪ್ಪಿ ಕಾಲೋನಿಯ ಒಳಗೆ ನುಸುಳಿದ್ದು, ಹಲವು ಗಂಟೆಗಳ ಬಳಿಕ ಅರಣ್ಯ ಇಲಾಖೆ ಸಿಬ್ಬಂದಿಗಳು ಆನೆಯನ್ನು ಅರಣ್ಯಕ್ಕೆ ಅಟ್ಟುವಲ್ಲಿ ಯಶಸ್ವಿಯಾದರು.

error: Content is protected !!