ಜನರ ಸಂಕಷ್ಟಕ್ಕೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸ್ಪಂದಿಸಲಿದೆ: ದಿವಾಕರ್.ಹೆಚ್.ಎಲ್ ಭರವಸೆ

ಸುಂಠಿಕೊಪ್ಪ: 1-8-2021 ರಂದು ನಗರದ ಪನ್ನೆ ಎಸ್ಟೇಟ್ ನ ಮೂವತ್ತು ಕುಟುಂಬಗಳಿಗೆ ಕಿಟ್ ವಿತರಿಸಿ ಮಾತನಾಡಿದ ದಂ.ಸಂ.ಸಮಿತಿಯ ಜಿಲ್ಲಾ ಸಂಚಾಲಕರಾದ ಹೆಚ್ ಎಲ್ ದಿವಾಕರ್ ಅವರು ಜೆಲ್ಲೆಯ ಮೂಲೆಮೂಲೆಗಳಿಗೆ ಸಂಚರಿಸಿ ಬಡವರ್ಗದ ಜನರಿಗೆ ಸಾಂತ್ವನ ಹೇಳುವ ನಿಟ್ಟಿನಲ್ಲಿ ಆಹಾರಕಿಟ್ ವಿತರಣೆ ಕಾರ್ಯಗಳನ್ನು ಮಾಡಿತ್ತಿದ್ದು ಇನ್ನು ಮುಂದೆಯೂ ಇದು ಮುಂದುವರಿಯಲಿದೆಯೆಂದು ಹೇಳಿದರು.

ಮಡಿಕೇರಿಯ ತಾಲ್ಲೂಕು ಸಂಚಾಲಕರಾದ ದೀಪಕ್ ಪೊನ್ನಪ್ಪ ಮಾತನಾಡಿ ದ.ಸಂ.ಸಮಿತಿ ಯ ಮುಖ್ಯ ಉದ್ದೇಶ ವಿಧ್ಯಾಭ್ಯಾಸವಾಗಿದ್ದು ಅದರೊಂದಿಗೆ ಆಹಾರ ಕಿಟ್ ವಿತರಣೆಯ ಮೂಲಕ ಜನರ ಸಂಕಷ್ಟಕ್ಕೆ ಸ್ಪಂದಿಸುವುದು ನಮ್ಮ ಮುಖ್ಯ ಉದ್ದೇಶವಾಗಲಿದೆ ಎಂದು ಹೇಳುವುದರ ಜೊತೆಗೆ ಸರ್ಕಾರದ ವಿವಿಧ ಅನುದಾನದ ಬಗ್ಗೆಯೂ ಮಾಹಿತಿ ನೀಡಿದರು.

ಪನ್ನೆ ವ್ಯಾಪ್ತಿಯ ಪಂಚಾಯತ್ ಸದಸ್ಯರಾದ ಗೌತಮ್ ಶಿವಪ್ಪ ಮಾತನಾಡಿ ಇಡೀ ಜಿಲ್ಲೆಯಲ್ಲಿ ಯಾರಿಗೇ ಸಮಸ್ಯೆ ಬಂದರೂ ಅವರ ನೆರವಿಗೆ ಧಾವಿಸುವ ಮೊದಲ ಸಂಘಟನೆ ಈ ದ.ಸಂ.ಸಮಿತಿ ಯಾಗಿದ್ದು ಇವರ ಮುಂದಿನ ಎಲ್ಲಾ ಕೆಲಸಗಳಿಗೆ ನಾವು ಜೊತೆಯಾಗುವುದಾಗಿ ಹೇಳಿದರು.

ಕಾರ್ಯಕ್ರಮದ ಕೊನೆಯಲ್ಲಿ ಕಿಟ್ ವಿತರಿಸಲಾಯಿತು. ಸಭೆಯಲ್ಲಿ ಜಿಲ್ಲಾ ಸಂಘಟನಾ ಸಂಚಾಲಕರಾದ ಐತಪ್ಪ,ಮಡಿಕೇರಿ ನಗರ ಸಂಚಾಲಕರಾದ ಸಿದ್ದೇಶ್ವರ, ಮತ್ತು ಪ್ರಮುಖರು ಹಾಜರಿದ್ದರು.

error: Content is protected !!