fbpx

ಜನರೇ ಜಾಗೃತರಾಗಿ ಬದುಕೋದು ಒಳಿತು:ಕೊಡಗು ಯುವ ಸೇನೆ

ಲಾಕ್ ಡೌನ್ ಅನ್ನು ಸರಕಾರ ಮತ್ತೊಮ್ಮೆ ಘೋಷಿಸಿದರೆ, ದೇಶಕ್ಕೂ,ಜನರಿಗೂ ಆರ್ಥಿಕ ಪರಿಸ್ಥಿತಿಯಲ್ಲಿ ಭಾರೀ ನಷ್ಟವಾಗುವ ಸಂಭವವಿರುತ್ತದೆ. ಲಾಕ್ ಡೌನ್ ಎಂಬುದನ್ನು ತೀರಾ ಅನಿವಾರ್ಯ ಪರಿಸ್ಥಿತಿ ಎದುರಾದರೆ ಮಾತ್ರವೇ ಸರಕಾರ ಘೋಷಿಸಲಿದೆ. ಅದಕ್ಕೂ ಮೊದಲೇ ಜನರೇ ಸ್ವ ಹಿತಾಸಕ್ತಿಯಿಂದ ಮುನ್ನೆಚ್ಚರಿಕೆ ವಹಿಸಿ, ಕೊರೋನಾ ನಿಯಂತ್ರಣಕ್ಕೆ ಸಹಕರಿಸಬೇಕಿದೆ.

ಕೊಡಗು ಯುವ ಸೇನೆಯ ಸಂಚಾಲಕ ಮಾಚೆಟ್ಟಿರ ಸಚಿನ್ ಮಂದಣ್ಣ

ಕೊಡಗಿನಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೊಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ಪರಿಸ್ಥಿತಿ ಹೀಗೇ ಸಾಗಿದರೆ ಮತ್ತಷ್ಟು ಬಿಗಡಾಯಿಸಲಿದೆ. ಕೊಡಗಿನ ಜನರು ಹಾಗಾಗಿ ಕೊರೋನಾ ಸೊಂಕನ್ನು ತಡೆಗಟ್ಟಲು ಅಗತ್ಯವಾದ ಜಿಲ್ಲಾಡಳಿತದ ಮಾರ್ಗಸೂಚಿಯನ್ನು ಪಾಲಿಸಬೇಕು. ಸ್ವ ಪ್ರೇರಿತರಾಗಿ ಕೊರೋನಾ ರೋಗದ ಶಮನಕ್ಕೆ ಆಸಕ್ತಿ ತೋರಬೇಕು ಎಂದು ಕೊಡಗು  ಯುವ ಸೇನೆ ಮನವಿ ಮಾಡಿಕೊಂಡಿದೆ.

ಕೊಡಗು ಯುವ ಸೇನೆಯ ಜಿಲ್ಲಾ ಪ್ರಮುಖರಾದ ಕುಲ್ದೀಪ್ ಪೂಣಚ್ಚ

ಕೊಡಗು ಯುವ ಸೇನೆ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನಗಳನ್ನು ಮೇಲಿಂದ ಮೇಲೆ ಮಾಡುತ್ತಲೇ ಇದೆ. ಜನರು ತಮ್ಮ ರಕ್ಷಣೆಯನ್ನು ತಾವೇ ನೋಡಿಕೊಳ್ಳಬೇಕು. ಜಿಲ್ಲೆಯಲ್ಲಿ ಕೊರೊನಾ ಸಮಸ್ಯೆ ಕೈ ಮೀರಿ ಹೋಗದಂತೆ ಜನತೆ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಜಿಲ್ಲೆಯಲ್ಲಿ ಹರಡುತ್ತಿರುವ ಕೊರೊನಾ ಸಮಸ್ಯೆಯನ್ನು ಬಗೆಹರಿಸುವಲ್ಲಿ ಸಹಕರಿಸಬೇಕೆಂದು ಈ ಮೂಲಕ ಕೊಡಗು ಯುವ ಸೇನೆಯ ಜಿಲ್ಲಾ ಸಂಚಾಲಕರಾದ ಮಾಚೆಟ್ಟಿರ ಸಚಿನ್ ಮಂದಣ್ಣ, ಜಿಲ್ಲಾ ಪ್ರಮುಖರಾದ ಕುಲ್ದೀಪ್ ಪೂಣಚ್ಚ ಅವರು ಕೊಡಗಿನ ಜನತೆಗೆ ಮನವಿ ಮಾಡಿಕೊಂಡಿರುವರು.

error: Content is protected !!