fbpx

ಜನರೇಟರ್ ಕಳ್ಳತನ: ಇಬ್ಬರ ಬಂಧನ

45 ಸಾವಿರ ಮೌಲ್ಯದ ಹೊಚ್ಚ ಹೊಸ ಜನರೇಟರ್ ಕಳುವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ನಾಪೋಕ್ಲು ಪೋಲಿಸರು ಬಂಧಿಸಿದ್ದಾರೆ.

ನಾಪೋಕ್ಲುವಿನ ಕಿರಂದಾಡು ಗ್ರಾಮದಲ್ಲಿ ನೂತನವಾಗಿ ತರಲಾಗಿದ್ದ ಜನರೇಟರ್ ಅನ್ನು ಮನೆಯಲ್ಲಿ ಯಾರು ಇಲ್ಲದ ಸಂದರ್ಭ ಹೊಂಚು ಹಾಕಿದ ಖದೀಮರು, ಜನರೇಟರನ್ನು ಮಾರಾಟ ಮಾಡಲು ಹೊರಟಿದ್ದರು ಎನ್ನಲಾಗಿದೆ. ದೂರಿನ ಅನ್ವಯ ಕಾರ್ಯಾಚರಣೆಗೆ ಇಳಿದ ನಾಪೋಕ್ಲು ಪೊಲೀಸರು ಹೊದವಾಡದ ಹಮೀದ್, ಬೇಟೆಬಾಣೆಯ ಬದ್ರುದ್ದೀನ್ ಎಂಬುವವರನ್ನು ಬಂಧಿಸಿ, ಬಂಧಿತರಿಂದ ಜನರೇಟರ್ ಮತ್ತು 2.50 ಲಕ್ಷ ಮೌಲ್ಯದ ಪಿಕಪ್ ಜೀಪು ವಶಕ್ಕೆ ಪಡೆಯಲಾಗಿದೆ.

error: Content is protected !!