ಜನರಲ್ ತಿಮ್ಮಯ್ಯನವರ ಹುಟ್ಟು ಹಬ್ಬ ಆಚರಣೆ

ಗೋಣಿಕೊಪ್ಪದ ಕಾವೇರಿ ಕಾಲೇಜಿನ ಎನ್.ಸಿ.ಸಿ.ಘಟಕದ ವತಿಯಿಂದ ೧೧೬ ನೇ ಹುಟ್ಟು ಹಬ್ಬ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಡಾ.ಕಾಳಿಮಾಡ ಶಿವಪ್ಪಭಾರತದ ರಕ್ಷಣಾ ಕ್ಷೇತ್ರಕ್ಕೆ ತನ್ನದೆ ಆದ ಕೊಡುಗೆ ನೀಡಿದ ಮಹಾನ್ ಚೇತನ ಅಂದಿನ ದಿನಗಳಲ್ಲಿ ಕಾಶ್ಮೀರ ಸಮಸ್ಯೆಯನ್ನು ಇತ್ಯರ್ಥ ಪಡಿಸಲು ಶ್ರಮಿಸಿದರು.ಭಾರತ -ಪಾಕಿಸ್ತಾನದ ಸಂದಿಗ್ಧ ಸಮಯದಲ್ಲಿ ಸೇನಾ ಕ್ಷೇತ್ರದಲ್ಲಿ ಚತುರತೆಯಿಂದ ಕಾರ್ಯನಿರ್ವಹಿಸಿದ್ದು,ಕೊರಿಯಾ ದೇಶದ ಯುದ್ಧಾನಂತರ ಸಂಯುಕ್ತ ರಾಷ್ಟ್ರಗಳ ಒಂದು ದಳಕ್ಕೆಅಧಿಪತಿಯಾದದ್ದು ಯುದ್ದ ಖೈದಿಗಳ ಸ್ವದೇಶದಲ್ಲಿ ಪುನರ್ವಸತಿಯನ್ನು ಸ್ಥಾಪಿಸುವುದರ ಹೊಣೆಹೊತ್ತಿದ್ದರು ಅವರ ಬಹಳಷ್ಟು ಕಾರ್ಯವನ್ನು ಈ ಸಂದರ್ಭದಲ್ಲಿ ಸ್ಮರಿಸಲಾಯಿತ್ತು , ಕಾಲೇಜಿನ ಆವರಣದಲ್ಲಿರುವ ಅವರ ಪ್ರತಿಮೆಗೆ ಪುಷ್ಪನಮನದ ಮೂಲಕ ಗೌರವವನ್ನು ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಪದವಿ ಕಾಲೇಜಿನ ಉಪಪ್ರಾಂಶುಪಾಲರಾದ ಡಾ.ಎ.ಎಸ್ಸ್.ಪೂವಮ್ಮ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರೊ ಎಸ್.ಎಸ್ . ಮಾದಯ್ಯ.ಎನ್.ಸಿ.ಸಿ ಅಧಿಕಾರಿಗಳಾದ ಲೆಫ್ಟಿನೆಂಟ್ ಅಕ್ರಂ, ಲೆಫ್ಟಿನೆಂಟ್ ಲೇಪಾಕ್ಷಿ, ಪ್ರಾಧ್ಯಾಪಕರಾದ ಪ್ರೊ.ಭಾರತಿ, ಕ್ಯಾಪ್ಟನ್ ಬ್ರೈಟಾಕುಮಾರ್ ಮತ್ತು ಕೆಡೆಟ್ಗಳು ಹಾಜರಿದ್ದರು.

error: Content is protected !!