ಜನದಟ್ಟಣೆ ನಿಯಂತ್ರಣಕ್ಕೆ ಮುಂದಾದ ಕೇಸರಿ ಪಡೆ

ಕೊಡಗು: ರಾಜ್ಯದಲ್ಲಿ ಲಾಕ್ ಡೌನ್ ಜಾರಿಗೊಳಿಸುವ ಮೊದಲೇ ಜನತಾ ಕರ್ಫ್ಯೂ ಜಾರಿಗೊಳಿಸಿದ್ದ ಕೊಡಗು ಜಿಲ್ಲಾಡಳಿತ ಸಂತೆಯನ್ನೂ ನಿರ್ಭಂಧಿಸಿರುವ ಹಿನ್ನಲೆಯಲ್ಲಿ ನಿಗದಿಪಡಿಸರುವ ವಾರದ ಎರಡು ದಿನಗಳಲ್ಲಿ ದಿನಸಿ,ತರಕಾರಿ ಇತರೆ ಸಾಮಗ್ರಿಗಳ ಖರೀದಿಗೆ ಆಗಮಿಸುವ ಜನಸಂಖ್ಯೆ ಹೇಚ್ಚಾಗುವ ಕಾರಣ ಸಾಮಾಜಿಕ ಅಂತರ ಕಾಯ್ಧುಕೊಳ್ಳಲು ಸಿದ್ದಾಪುರ ಕೇಸರಿ ಯುವ ಪಡೆ ತಾವೇ ಅಂಗಡಿಗಳ ಮುಂದೆ ಸಾಲಾಗಿ ತೆರಳಲು,ಅಂತರ ಕಾಪಾಡಿಕೊಳ್ಳಲು ಮತ್ತು ‌ಬೀದಿಬದಿಯ ವ್ಯಾಪಾರಿಗಳ ನಡುವೆ ಅಂತರ ಕಾಪಾಡುವ ಎಲ್ಲಾ ಕ್ರಮಗಳನ್ನು ಕೈಗೊಂಡಿದ್ದಾರೆ.

ಒಂದೆಡೆ ಈ ಕಾರ್ಯ ನಡೆದರೆ ಮತ್ತೊಂದೆಡೆ ಸ್ಯಾನಿಟೈಸರ್ ಸಿಂಪಡಣೆ,ಅಂತರ ಕಾಪಾಡುವ ಸಂದೇಶ ಸಾರುವ ಮೂಲಕ ಕೇಸರಿ ಯುವ ಬ್ರಿಗೇಡ್ ತನ್ನ ಜವಬ್ದಾರಿ ನಿರ್ವಹಿಸುತ್ತಿದೆ.

error: Content is protected !!