ಜಡಿಮಳೆಯಲ್ಲಿ ಅಪರೂಪದ ಜೋಡಿ ಅತಿಥಿಗಳ ದರ್ಶನ

ಮಂಜಿನ ನಗರಿ ಮಡಿಕೇರಿಗೆ ಅಪರೂಪದ ಅತಿಥಿಗಳು ಆಗಮಿಸಿದ್ದು, ಅಚ್ಚರಿ ಮೂಡಿಸಿದ್ದಾರೆ.ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದ ಸಮೀಪದ ನೆಲ್ಲಮಕ್ಕಡ ಕುಸುಮ ಎಂಬುವವರ ಮನೆಯ ಅಂಗಳದಲ್ಲಿ ಜೋಡಿ ಮುಳ್ಳುಹಂದಿಗಳು ಗೋಚರಿಸಿದೆ.

ಸ್ವಯಂ ರಕ್ಷಣೆಗಿರುವ ಮುಳ್ಳನ್ನು ಅರಳಿಸಿ ಜಡಿಮಳೆಯ ನಡುವೆ ಕೆಲ ಹೊತ್ತು ಅಂಗಳದಲ್ಲಿ ಅಡ್ಡಾಡಿ ಗೇಟ್ ಮೂಲಕ ರಸ್ತೆಯ ಮೂಲಕ ತೆರಳಿದ್ದು, ಮನೆಯ ಮಂದಿ ಈ ಅಪರೂಪದ ಚಿತ್ರವನ್ನು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

error: Content is protected !!