fbpx

“ಜಟಾಯು”ವಿಗೆ ಕೊನೆಗೂ ಸಿಕ್ಕಿತು ನೆಲೆ!

ಅಂಕಣ: ‘ವನ್ಯ ಅನನ್ಯ’

ಗಿರಿಧರ್ ಕೊಂಪುಳೀರ, ಪ್ರಧಾನ ವರದಿಗಾರರು ಹಾಗು ಅಂಕಣಕಾರರು

ಸೀತಾಪಹರಣ ಸಂದರ್ಭ ರಾಮ ಮತ್ತು ಲಕ್ಷ್ಮಣರಿಗೆ ಸೀತೆಯನ್ನು ಅಪಹರಿಸಿದ್ದು ಒಬ್ಬ ಅತೀ ಮಾನುಷ ಶಕ್ತಿ ಇರುವ ರಾಜ,ಆತನು ಗಾಳಿಯಲ್ಲಿ ರಥ(ಪುಷ್ಪಕ ವಿಮಾನ) ದಲ್ಲಿ ಬಂದಿದ್ದ,ದಕ್ಷಿಣಕ್ಕೆ ಸೀತಾದೇವಿಯನ್ನು ರಕ್ಷಿಸಿ ಕನೆಗೆ ತನ್ನ ರೆಕ್ಕೆ ಕಳೆದುಕೊಂಡ ಸಂದರ್ಭ ರಾಮನಿಗೆ ಮಾಹಿತಿ ನೀಡಿದ್ದು ಜಟಾಯು. ಇದು ರಾಮಾಯಣದಲ್ಲಿ ಈ ರೀತಿಯ ಒಂದು ಸನ್ನಿವೇಶ ಬರುತ್ತದೆ.ಅದೇ ಜಟಾಯು ಅರ್ಥಾತ್ ಇಂಡಿಯನ್ ವಲ್ಚರ್ ಅಪಾಯದ ಅಂಚಿನಲ್ಲಿದೆ. ಹೆಚ್ಚಾಗಿ ಅಳಿವಿನ ಅಂಚಿನಲ್ಲಿರುವ ಇವುಗಳ ರಕ್ಷಣೆಗೆ ಎರಡು ರಾಜ್ಯಗಳು ರೂಪುರೇಷೆ ನಡೆಸಿವೆ. ಪಂಜಾಬ್ ಮತ್ತು ಹರಿಯಾಣದ ಕಲ್ಲು ಗುಡ್ಡ(ರಾಮನಗರದಲ್ಲಿ ಇರುವ ರೀತಿ) ಪ್ರದೇಶದಲ್ಲಿ ಹೆಚ್ಚು ವಾಸಿಸುತ್ತವೆ.

ಇವುಗಳ ರಕ್ಷಣೆಗಾಗಿ ಎರಡು ರಾಜ್ಯಗಳು ಪಿಂಜೋರ್ ನಲ್ಲಿರುವ ಬಿರ್ ಶಿಕೀರ್ಭಾಗ್ ವನ್ಯಜೀವಿ ಉದ್ಯಾನವನದಲ್ಲಿ 100 ಕಿಲೋಮೀಟರ್ ಸುತ್ತಮುತ್ತ ಇವುಗಳ ಆವಾಸ ತಾಣ ಎಂದು ಗುರುತಿಸಿದೆ. ಈ ನಡುವೆ ಮದ್ಯಪ್ರದೇಶ ಬುಂದೇಲ್ಕಂಡ್ ಎನ್ನುವಲ್ಲಿ 300 ಕಿಲೋಮೀಟರ್ ಸುತ್ತಮುತ್ತ ಈ ಪ್ರಯೋಗ ನಡೆಸಿದ್ದು ಆರೋಗ್ಯವಂತ ಎರಡು ರಣ ಹದ್ದುವಿಗೆ ಉಪಗ್ರಹ ನಿರ್ವಾಹಕ ಕ್ಯಾಮರಾ ಹೊಂದಿರುವ ಕಾಲರ್ ಐಡಿ ಅಳವಡಿಸಿದ್ದು, ಶೇ 32 ರಷ್ಟು ವಂಶಾಭಿವೃದ್ಧಿ ಮಾಡುವ ಬಗ್ಗೆ ದಾಖಲೆಗಳು ಸಿಕ್ಕಿದೆ. ವಿಶೇಷ ಎಂದರೆ ರಣ ಹದ್ದುವಿಗೆ ಒಂದು ಬಲಿಷ್ಟ ಎತ್ತುವನ್ನು ಕೂಡ ಎತ್ತೊಯ್ಯ ಬಲ್ಲ ತಾಕತ್ ಇರುತ್ತದೆ…. ಅಚ್ಚರಿ ಆದರೂ ಸತ್ಯ.!

ಗಿರಿಧರ್ ಕೊಂಪುಳೀರ, ಅಂಕಣಕಾರರು
error: Content is protected !!