fbpx

ಜಂಬೂ ಸವಾರಿಗೆ ಕೊಡಗಿನ ಗಜಪಡೆ ಸಜ್ಜು

ಚಿತ್ರ:ನಾಗೇಶ್ ಪಾಣ್ತಲೆ

ಕೊಡಗು: ಮತ್ತಿಗೋಡಿನ ಅಭಿಮನ್ಯು ನೇತೃತ್ವದ ಜಿಲ್ಲೆಯ ಕಾವೇರಿ,ವಿಜಯ,ಗೋಪಿ,ವಿಕ್ರಮ ಆನೆಗಳು ನಾಡ ಹಬ್ಬ ದಸರಾದ ಪ್ರಮುಖ ಆಕರ್ಷಣೆ ಜಂಬೂ ಸವಾರಿಗೆ ಸಕತ್ ತಾಲೀಮು ನಡೆಸಿದ್ದು ಸೋಮವಾರದ ವಿಜಯದಶಮಿಯ ಚಿನ್ನದ ಅಂಬಾರಿ ಹೊತ್ತು ಸಾಗುವ ಕೊಡಗಿನ ಆನೆಗಳು ವಿಶ್ವವ್ಯಾಪಿ ಕಂಗೊಳಿಸಲಿದೆ.ಇದೇ ಮೊದಲ ಭಾರಿಗೆ ಅಭಿಮನ್ಯು ನೈತೃತ್ವದ ತಂಡ ಕೊವಿಡ್ ನಿಂದ ಸೀಮಿತಗೊಂಡಿರುವ ಆರಮನೆ ಆವರಣದ ಪಥದಲ್ಲಿ ತಾಲೀಮು ಮುಗಿಸಿದ್ದು ಸಂಪೂರ್ಣ ತಂಡ ಅಧಿಕಾರಿಗಳು,ವೈದ್ಯರಲ್ಲಿಮೆಚ್ಚುಗೆ ಪಡೆದಿದೆ.

ಈಗಾಗಲೇ ಅಭಿಮನ್ಯುವಿನ ಮಾವುತ ವಸಂತ ಸಹ ಎಲ್ಲಾ ತರಬೇತಿ ನೀಡಿದ್ದು,ಆತನ ನಿರ್ದೇಶನದಂತೆ ಜಂಬೂ ಸವಾರಿ ನಡೆಯಲಿದೆ.ಮರದ ಅಂಬಾರಿ ಹೊರೆಸಿ,ಗಣ್ಯರ ಬಳಿ ತೆರಳಿ ದೇವಿಗೆ ಪುಷ್ಪ ನಮನ ಮಾಡುವುದು,ಸಂಪೂರ್ಣ ತಂಡವನ್ನು ನಿಯಂತ್ರಿಸುವ ಕೆಲಸದ ಬಗ್ಗೆ ತಾಲೀಮು ನಡೆಸಿದ್ದು,ವಿಜಯದಶಮಿಯಂದು ಚಿನ್ನದ ಅಂಬಾರಿಯೊಂದಿಗೆ ಇದೇ ಪದ್ದತಿ ನಡೆಯಲಿದೆ.

error: Content is protected !!