ಜಂಬೂರು ಪುನರ್ವಸತಿ ನೀರಿನ ಸಮಸ್ಯೆ,ಶಾಸಕರಿಂದ ಸ್ಪಂದನೆ


ಕೊಡಗು: ಕುಡಿಯುವ ನೀರಿನ ಸಮಸ್ಯೆ,ಚರಂಡಿ,ಮತ್ತು ಶೌಚ ಗುಂಡಿಯ ಸಮಸ್ಯೆ ಎದುರಿಸುತ್ತಿದ್ದ ಜಂಬೂರುವಿನ ನಿರಾಶ್ರಿತರ ಪುನರ್ವಸತಿ ಕೇಂದ್ರಕ್ಕೆ ಅಗತ್ಯ ಸೌಲಭ್ಯ ಒದಗಿಸಲು ಶಾಸಕ ಅಪ್ಪಚ್ಚು ರಂಜನ್ ಅಧಿಕಾರಿಗಳಿಗೆ ಸೂಚನೆ ನೀಡಿದ್ಧಾರೆ.

ಸ್ಥಳದಲ್ಲೇ ಕೊಳವೆ ಬಾವಿ ನಿರ್ಮಾಣಕ್ಕೆ ಸ್ಥಳ ಗುರುತಿಸುವಿಕೆ, ಶಾಶ್ವತ ಕುಡಿಯುವ ನೀರಿಗಾಗಿ ಪಕ್ಕದದ ನದಿಯಿಂದ ಪೈಪ್ ಲೈನ್ ಮೂಲಕ ಸರಬರಾಜು ಮಾಡಲು ಹಾಗು ಕೊಳಚೆ ಮತ್ತು ಮಳೆ ನೀರು ಸರಾಗ ಹರಿಯಲು ಚರಂಡಿ ಶುದ್ಧೀಕರಣ ಮತ್ತು ಶೌಚಗುಂಡಿ ಅವ್ಯವಸ್ಥೆ ಸರಿಪಡಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.

error: Content is protected !!