fbpx

ಜಂಗಲ್ ಸಫಾರಿ ಆರಂಭ

ಕೊಡಗು: ಕೋವಿಡ್-19 ನಿಂದಾಗಿ ಕಳೆದ ಎಂಟು ತಿಂಗಳಿಂದ ಸ್ಥಗಿತಗೊಂಡಿದ್ದ ನಾಗರಹೊಳೆಯ ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನದಲ್ಲಿ ಜಂಗಲ್ ಸಫಾರಿ ಮತ್ತೆ ಆರಂಭವಾಗಿದೆ.ಭಾನುವಾರದಿಂದ ಆರಂಭವಾಗಿರುವ ಸಫಾರಿ ಪ್ರತಿ ದಿನ ಬೆಳಿಗ್ಗೆ 6 ಮತ್ತು 7.30ಕ್ಕೆ ಮದ್ಯಾಹ್ನ 2 ಮತ್ತು 3.30ಕ್ಕೆ ಸಮಯ ನಿಗಧಿಪಡಿಸಲಾಗಿದೆ.ಕೋವಿಡ್ ನ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಲಾಗುತ್ತಿದ್ದು ಸಫಾರಿ ಬಸ್ಸಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸಲುವಾಗಿ ಒಂದು ಭಾರಿಗೆ 20 ಮಂದಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದು ಎಸಿಎಫ್ ಗೋಪಾಲ್ ಸ್ಪಷ್ಟಪಡಿಸಿದ್ದಾರೆ.

error: Content is protected !!