‘ಛೋಟಾ ರಾಜನ್’ ಸ್ಥಿತಿ ಕರೋನಾದಿಂದ ಗಂಭೀರ!

ದೆಹಲಿ : ಏಮ್ಸ್ ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿನಿಂದಾಗಿ ಚಿಕಿತ್ಸೆ ಪಡೆಯುತ್ತಿದ್ದಂತ ಅಂಡರ್ ವರ್ಲ್ಡ್ ಡಾನ್ ಛೋಟಾ ರಾಜನ್, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎಂಬುದಾಗಿ ಅನೇಕ ಮಾಧ್ಯಮಗಳು ವರದಿ ಮಾಡಿದ್ದವು. ಆದ್ರೇ ಛೋಟಾ ರಾಜನ್ ಸಾವನ್ನಪ್ಪಿಲ್ಲ. ಅವರು ಇನ್ನೂ ಬದುಕಿದ್ದು, ಚಿಕಿತ್ಸೆ ಪಡೆಯುತ್ತಿರುವುದಾಗಿ ಏಮ್ಸ್ ಸ್ಪಷ್ಟ ಪಡಿಸಿದೆ.

ಈ ಕುರಿತಂತೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವಂತ ಏಮ್ಸ್, ಕೊರೋನಾ ಸೋಂಕಿನಿಂದಾಗಿ ಬಳಲುತ್ತಿದ್ದಂತ ಛೋಟಾ ರಾಜನ್ ಏಪ್ರಿಲ್ 26ರಂದು ಏಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದರು. ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅವರಿನ್ನೂ ಜೀವಂತವಾಗಿದ್ದಾರೆ. ಅವರು ಸಾವನ್ನಪ್ಪಿದ್ದಾರೆ ಎಂಬುದು ಸುಳ್ಳು ಎಂಬುದಾಗಿ ಸ್ಪಷ್ಟ ಪಡಿಸಿದೆ.

ಅಂದಹಾಗೇ, ರಾಜೇಂದ್ರ ನಿಕಾಲ್ಜೆ ಆಲಿಯಾಸ್ ಛೋಟಾ ರಾಜನ್ ಅವರನ್ನು ಏಪ್ರಿಲ್ 26 ರಂದು ಏಮ್ಸ್ ಗೆ ದಾಖಲಿಸಲಾಯಿತು. 2015ರಲ್ಲಿ ಇಂಡೋನೇಷ್ಯಾದಿಂದ ಬಂಧನಕ್ಕೊಳಗಾದ ನಂತರ ಅವರನ್ನು ನವದೆಹಲಿಯ ಉನ್ನತ ಭದ್ರತೆಯ ತಿಹಾರ್ ಜೈಲಿನಲ್ಲಿ ಇರಿಸಲಾಗಿದೆ.

error: Content is protected !!