ಚೋರ ಬಂಧನ : ೧೪ ಲಕ್ಷ ಆಭರಣ ವಶ

ಬಸ್ ಗಳಲ್ಲಿ ಪ್ರಯಾಣಿಕರ ವಸ್ತುಗಳ ನಿಗಾ ವಹಿಸಿ ಪಿಕ್ ಪಾಕೆಟ್ ಮಾಡುತ್ತಿದ್ದ ಮಡಿಕೇರಿಯ ಕಳ್ಳನೊಬ್ಬನನ್ನು ಮೈಸೂರಿನ ಲಷ್ಕರ್ ಪೊಲೀಸರು ಬಂಧಿಸಿದ್ದಾರೆ.
2020 ಜನವರಿ 6 ರಂದು ಪ್ರೇಮ ಎಂಬವರು ರಾಮನಗರದಿಂದ ಮಡಿಕೇರಿಗೆ ಹೋಗುವ ವೇಳೆ ಲಗೇಜ್ ಬ್ಯಾಗ್ ಕ್ಯಾರಿಯರ್ ನಲ್ಲಿ ಇಟ್ಟಿದ್ದ ೮೯ ಗ್ರಾಂ ನಷ್ಟು ಚಿನ್ನಾಬರಣಗಳಿದ್ದ ಬ್ಯಾಗ್ ನಾಪತ್ತೆ ಅಗಿದ್ದ ಪ್ರಕರಣ ಸಂಬಂಧ.ಲಷ್ಕರ್ ಪೊಲೀಸ್ ಠಾಣೆಗೆ ದೂರು ನೀಡಿದ್ದ ಹಿನ್ನಲೆಯಲ್ಲಿ ತನಿಖೆ ಕೈಗೊಂಡ ಪೊಲೀಸರು ಬಸ್ ನಿಲ್ದಾಣದಲ್ಲಿ ಗಸ್ತು ತಿರುಗುತ್ತಿದ್ದ ವೇಳೆ ಬಸ್ ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಠಾಣೆಯ ಹಳೆಯ ಕ್ರಿಮಿನಲ್ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ತ್ಯಾಗರಾಜ್ ಕಾಲನಿಯ ಮೊಹಮ್ಮದ್ ಇಮ್ರಾನ್ ಅಲಿಯಾಸ್ ಇಮ್ರಾನ್ ಬಿನ್ ಲೇಟ್ ನಸೀರ್ ಅಹ್ಮದ್(37)ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಸಂದರ್ಭ ತಾನು ಇಸ್ಪೀಟ್ ಆಟ ಆಡುತ್ತಿದ್ದು ತುಂಬಾ ಸಾಲ ಮಾಡಿಕೊಂಡಿದ್ದರ ಪರಿಣಾಮ ಸಾಲಗಾರರ ಕಾಟ, ಮನೆಯ ನಿರ್ವಹಣೆಗೆ ಬಸ್ ಗಳಲ್ಲಿ ಕಳ್ಳತನಕ್ಕೆ ಇಳಿದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಬಂಧಿತನಿಂದ 13 ಲಕ್ಷ 85 ಸಾವಿರ ಬೆಲೆ ಬಾಳುವ ಸುಮಾರು 277 ಗ್ರಾಂ ತೂಕದ ಚಿನ್ನಾಭರಣವನ್ನು ಲಷ್ಕರ್ ಪೋಲಿಸರು ವಶಪಡಿಸಿಕೊಂಡಿದ್ದಾರೆ.